ADVERTISEMENT

938 ಅಂಶ ಕುಸಿದ ಸೆನ್ಸೆಕ್ಸ್

ಪಿಟಿಐ
Published 27 ಜನವರಿ 2021, 15:59 IST
Last Updated 27 ಜನವರಿ 2021, 15:59 IST

ಮುಂಬೈ/ನವದೆಹಲಿ: ವಿದೇಶಿ ಬಂಡವಾಳದ ಹೊರಹರಿವು ಹಾಗೂ ಲಾಭ ಗಳಿಕೆಯ ಉದ್ದೇಶದ ವಹಿವಾಟಿನ ಪರಿಣಾಮವಾಗಿ ಬಿಎಸ್‌ಇ ಸೆನ್ಸೆಕ್ಸ್ ಬುಧವಾರದ ವಹಿವಾಟಿನಲ್ಲಿ 938 ಅಂಶಗಳ ಇಳಿಕೆ ಕಂಡಿತು.

ನಿಫ್ಟಿ ಸೂಚ್ಯಂಕವು 271 ಅಂಶ ಇಳಿಕೆ ಕಂಡಿತು. ಎಕ್ಸಿಸ್ ಬ್ಯಾಂಕ್, ಟೈಟಾನ್, ಇಂಡಸ್ ಇಂಡ್ ಬ್ಯಾಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಡಾ ರೆಡ್ಡಿಸ್, ಎಚ್‌ಡಿಎಫ್‌ಸಿ ಮತ್ತು ಏಷ್ಯನ್ ಪೇಂಟ್ಸ್ ಕಂಪನಿ ಷೇರುಗಳು ಕುಸಿದವು. ಟೆಕ್ ಮಹೀಂದ್ರ, ಐಟಿಸಿ, ಪವರ್ ಗ್ರಿಡ್, ಅಲ್ಟ್ರಾಟೆಕ್‌ ಸಿಮೆಂಟ್, ಎಚ್‌ಸಿಎಲ್ ಟೆಕ್ ಮತ್ತು ನೆಸ್ಲೆ ಇಂಡಿಯಾ ಷೇರುಗಳು ಏರಿಕೆ ದಾಖಲಿಸಿದವು.

ಸೆನ್ಸೆಕ್ಸ್ ನಾಲ್ಕು ದಿನಗಳಿಂದ ಕುಸಿತದ ಹಾದಿಯಲ್ಲಿ ಇರುವ ಪರಿಣಾಮವಾಗಿ ಹೂಡಿಕೆದಾರರ ಸಂಪತ್ತು ₹ 8 ಲಕ್ಷ ಕೋಟಿಯಷ್ಟು ಕರಗಿದೆ. ನಾಲ್ಕು ದಿನಗಳ ವಹಿವಾಟಿನಲ್ಲಿ ಸೂಚ್ಯಂಕವು ಒಟ್ಟು 2,382 ಅಂಶಗಳ ಇಳಿಕೆ ಕಂಡಿದೆ.

ADVERTISEMENT

‘ಕಾರ್ಪೊರೇಟ್ ಕಂಪನಿಗಳ ಫಲಿತಾಂಶಗಳು ನಿರೀಕ್ಷೆಗಿಂತಲೂ ಚೆನ್ನಾಗಿವೆ. ಆದರೆ, ಬಹುತೇಕ ಕಂಪನಿಗಳ ಷೇರುಗಳ ವಿಚಾರದಲ್ಲಿ ಲಾಭ ಗಳಿಕೆಯ ಉದ್ದೇಶದ ವಹಿವಾಟು ನಡೆಯುತ್ತಿದೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಸ್ಮಿಕ್ ಓಜಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.