ADVERTISEMENT

ತಣ್ಣಗಾದ ಅಮೆರಿಕ–ಇರಾನ್‌ ಬಿಕ್ಕಟ್ಟು; ಷೇರು ಪೇಟೆಗಳಲ್ಲಿ ಖರೀದಿ ಉತ್ಸಾಹ

ಸೆನ್ಸೆಕ್ಸ್‌ 635 ಅಂಶಗಳ ಏರಿಕೆ

ಏಜೆನ್ಸೀಸ್
Published 9 ಜನವರಿ 2020, 11:57 IST
Last Updated 9 ಜನವರಿ 2020, 11:57 IST
ಚೇತರಿಕೆ ಕಂಡ ಷೇರು ಪೇಟೆ
ಚೇತರಿಕೆ ಕಂಡ ಷೇರು ಪೇಟೆ   

ಮುಂಬೈ: ಅಮೆರಿಕ ಮತ್ತು ಇರಾನ್‌ ನಡುವಿನ ಬಿಕ್ಕಟ್ಟು ತಣ್ಣಗಾಗಿರುವಂತೆ ತೋರುತ್ತಿದ್ದಂತೆ ಷೇರು ಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು. ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 635 ಅಂಶಗಳ ಏರಿಕೆ ದಾಖಲಿಸಿತು.

ಶೇ 1.55ರಷ್ಟು ಹೆಚ್ಚಳದೊಂದಿಗೆ ಸೆನ್ಸೆಕ್ಸ್‌ 41,452.35 ಅಂಶ ತಲುಪಿತು. ಇದರೊಂದಿಗೆ ನಿಫ್ಟಿ ಶೇ 1.58 ಏರಿಕೆಯೊಂದಿಗೆ 12,215.90 ಅಂಶ ಮುಟ್ಟಿತು. ಐಸಿಐಸಿಐ ಬ್ಯಾಂಕ್‌ ಶೇ 3.80 ಗಳಿಕೆ ದಾಖಲಿಸಿದರೆ, ಎಸ್‌ಬಿಐ, ಮಹೀಂದ್ರ ಆ್ಯಂಡ್ ಮಹೀಂದ್ರಾ, ಇಂಡಸ್‌ಇಂಡ್‌ ಬ್ಯಾಂಕ್‌, ಮಾರುತಿ ಸುಜುಕಿ, ಏಷಿಯನ್‌ ಪೇಯಿಂಟ್ಸ್‌ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ ಷೇರುಗಳ ಬೆಲೆಯಲ್ಲೂ ಏರಿಕೆ ಕಂಡಿತು.

ಟಿಸಿಎಸ್‌, ಎಚ್‌ಸಿಎಲ್‌ ಟೆಕ್‌, ಎನ್‌ಟಿಪಿಸಿ ಮತ್ತು ಸನ್‌ ಫಾರ್ಮಾ ಷೇರುಗಳು ಶೇ 1.73ರಷ್ಟು ಕುಸಿತ ಕಂಡವು.

ADVERTISEMENT

ಅಮೆರಿಕದೊಂದಿಗೆ ಮಧ್ಯಂತರ ವ್ಯಾಪಾರ ಒ‍ಪ್ಪಂದ ಮಾಡಿಕೊಳ್ಳಲು ಚೀನಾ ಆಸಕ್ತಿ ತೋರಿರುವುದು, ಇರಾನ್‌ ಜತೆಗೆ ಅಮೆರಿಕ ಶಾಂತಿ ಕಾಯ್ದುಕೊಳ್ಳುವ ಹೇಳಿಕೆ ಪ್ರಕಟಗೊಳ್ಳುತ್ತಿದ್ದಂತೆ ಷೇರು ಪೇಟೆಗಳಲ್ಲಿ ವಹಿವಾಟು ಚೇತರಿ ಕಂಡಿದೆ.

70 ಡಾಲರ್‌ ದಾಟಿಟ್ಟ ಬೆಂಟ್‌ ಕಚ್ಚಾ ತೈಲ ಬ್ಯಾರೆಲ್ ಬೆಲೆ ಗುರುವಾರ 65.70 ಡಾಲರ್‌ಗಳಲ್ಲಿ ವಹಿವಾಟು ನಡೆದಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ ₹ 71.43 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.