ಷೇರು ಮಾರುಕಟ್ಟೆ
ಮುಂಬೈ: ಭಾರತ– ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಡಿಮೆಯಾಗಿ ಕದನ ವಿರಾಮ ಘೋಷಣೆಯಾದ ಬಳಿಕ ಇಂದು ಷೇರು ಮಾರುಕಟ್ಟೆಯ ವಹಿವಾಟು ಏರಿಕೆಯೊಂದಿಗೆ ಆರಂಭಗೊಂಡಿದೆ.
ಆರಂಭಿಕ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ 1,793.73 ಅಂಶಗಳಷ್ಟು ಏರಿಕೆ ಕಂಡು 81,248.20ಕ್ಕೆ ತಲುಪಿದೆ. ನಿಫ್ಟಿ 553.25 ಅಂಶ ಹೆಚ್ಚಳವಾಗಿ 24,561.25 ತಲುಪಿದೆ.
ಶುಕ್ರವಾರ ದೇಶೀಯ ಷೇರುಪೇಟೆಯಲ್ಲಿ ಕರಡಿ ಕುಣಿತ ಜೋರಾಗಿತ್ತು. ಇದರಿಂದ ಸೂಚ್ಯಂಕಗಳು ಶೇ 1ರಷ್ಟು ಕುಸಿತ ಕಂಡಿದ್ದವು. ಪರಿಣಾಮ ಹೂಡಿಕೆದಾರರ ಸಂಪತ್ತು ₹7 ಲಕ್ಷ ಕೋಟಿ ಕರಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.