ADVERTISEMENT

ಗಳಿಕೆ ಕಾಯ್ದುಕೊಳ್ಳದ ಷೇರುಪೇಟೆ

ಪಿಟಿಐ
Published 8 ಏಪ್ರಿಲ್ 2020, 20:00 IST
Last Updated 8 ಏಪ್ರಿಲ್ 2020, 20:00 IST
   

ಮುಂಬೈ: ದೇಶದ ಷೇರು ಪೇಟೆಗಳು ದಿನದ ಆರಂಭದಲ್ಲಿ ಕಂಡುಕೊಂಡಿದ್ದ ಗಳಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದರಿಂದ ನಕಾರಾತ್ಮಕ ಹಾದಿಯಲ್ಲಿ ವಹಿವಾಟು ಅಂತ್ಯವಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ದಿನದ ಗರಿಷ್ಠ ಮಟ್ಟದಿಂದ 1,300 ಅಂಶಗಳಷ್ಟು ಕುಸಿಯಿತು. ಅಂತಿಮವಾಗಿ 173 ಅಂಶಗಳ ಇಳಿಕೆಯೊಂದಿಗೆ 29,894 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರೂಪಾಯಿ ಕುಸಿತ: ಕರೆನ್ಸಿ ವಿನಿ ಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 70 ಪೈಸೆ ಕುಸಿತ ಕಂಡು ಒಂದು ಡಾಲರ್‌ಗೆ ₹76.34ರಂತೆ ವಿನಿಮಯ ಗೊಂಡಿತು. ಇದು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.