ADVERTISEMENT

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,000 ಅಂಶಗಳಷ್ಟು ಕುಸಿತ

ಪಿಟಿಐ
Published 25 ಏಪ್ರಿಲ್ 2025, 6:47 IST
Last Updated 25 ಏಪ್ರಿಲ್ 2025, 6:47 IST
ಸೆನ್ಸೆಕ್ಸ್
ಸೆನ್ಸೆಕ್ಸ್    

ಮುಂಬೈ: ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ತೀವ್ರ ಕುಸಿತ ಕಂಡಿವೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳು ಕುಸಿತಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 1,004.04 ಅಂಶಗಳಷ್ಟು ಕುಸಿದು 78,797.39ಕ್ಕೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ 338.1 ಅಂಶಗಳಷ್ಟು ಕುಸಿತ ಕಂಡು 23,908.60ಕ್ಕೆ ತಲುಪಿತ್ತು.

ದೇಶದ ಖಾಸಗಿ ವಲಯದ ಮೂರನೇ ಅತಿದೊಡ್ಡ ಕಂಪನಿಯಾದ ಆಕ್ಸಿಸ್ ಬ್ಯಾಂಕ್‌ನ ಮಾರ್ಚ್ ತ್ರೈಮಾಸಿಕದ ಲಾಭವು ಅಲ್ಪಮಟ್ಟಗೆ ಕುಸಿ ಪರಿಣಾಮ ಆ್ಯಕ್ಸಿಸ್ ಷೇರು ಮೌಲ್ಯ ಶೇ 4.50ರಷ್ಟು ಕುಸಿದಿತ್ತು.

ADVERTISEMENT

ಅದಾನಿ ಪೋರ್ಟ್ಸ್, ಬಜಾಜ್ ಫಿನ್‌ಸರ್ವ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪವರ್ ಗ್ರಿಡ್, ಎಟರ್ನಲ್, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಟಾಟಾ ಮೋಟರ್ಸ್, ಮಹೀಂದ್ರ ಅಂಡ್ ಮಹೀಂದ್ರ ಮತ್ತು ಟಾಟಾ ಸ್ಟೀಲ್ ಕೂಡ ಹಿನ್ನಡೆ ಅನುಭವಿಸಿದವು.

ಆದರೂ, ಇನ್ಫೋಸಿಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಷೇರುಗಳು ಏರಿಕೆ ದಾಖಲಿಸಿದ್ದವು.

ಕಳೆದ 7 ದಿನಗಳಲ್ಲಿ ಒಟ್ಟು ₹29,513 ಕೋಟಿ ಮೌಲ್ಯದ ಎಫ್‌ಐಐ ಹೂಡಿಕೆ ಹರಿದುಬಂದಿದೆ.

ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ ಸೂಚ್ಯಂಕ, ಟೋಕಿಯೊದ ನಿಕ್ಕಿ 225, ಶಾಂಘೈ ಎಸ್‌ಎಸ್‌ಇ ಕಾಂಪೋಸಿಟ್ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಏರಿಕೆ ದಾಖಲಿಸಿವೆ.

ಗುರುವಾರ ಅಮೆರಿಕ ಮಾರುಕಟ್ಟೆಗಳು ಗಮನಾರ್ಹವಾಗಿ ಏರಿಕೆ ದಾಖಲಿಸಿದ್ದವು.

ವಿನಿಮಯ ಕೇಂದ್ರದ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ ₹8,250.53 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.