ADVERTISEMENT

ಷೇರುಪೇಟೆ: ಆರಂಭಿಕ ಕುಸಿತದ ಬಳಿಕ ಚೇತರಿಕೆ; ಸೆನ್ಸೆಕ್ಸ್ 900 ಅಂಶಗಳಷ್ಟು ಏರಿಕೆ

ಪಿಟಿಐ
Published 23 ಮೇ 2025, 7:27 IST
Last Updated 23 ಮೇ 2025, 7:27 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರದ ಆರಂಭಿಕ ಕುಸಿತದ ಬಳಿಕ ಚೇತರಿಸಿಕೊಂಡಿವೆ. ಬ್ಲೂಚಿಪ್ ಐಟಿ ಷೇರುಗಳು ಮತ್ತು ಐಟಿಸಿ ಷೇರು ಖರೀದಿ ಭರಾಟೆ ಹಿನ್ನೆಲೆಯಲ್ಲಿ ಈ ಏರಿಕೆ ಕಂಡುಬಂದಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 953.18 ಅಂಶಗಳಷ್ಟು ಏರಿಕೆ ಕಂಡು, 81,905ಕ್ಕೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ 299.35 ಅಂಶಗಳಷ್ಟು ಏರಿಕೆ ಕಂಡು 24,909ಕ್ಕೆ ತಲುಪಿತ್ತು.

ಸೆನ್ಸೆಕ್ಸ್ ಕಂಪನಿಗಳ ಪೈಕಿ ಐಟಿಸಿ, ಎಟರ್ನಲ್, ಪವರ್ ಗ್ರಿಡ್, ಟೆಕ್ ಮಹೀಂದ್ರ, ಎಚ್‌ಸಿಎಲ್ ಟೆಕ್ ಮತ್ತು ಮಹೀಂದ್ರ ಲಾಭ ಗಳಿಸಿವೆ. ಸನ್ ಫಾರ್ಮಾ ಷೇರುಗಳು ಮಾತ್ರ ನಷ್ಟ ಅನುಭವಿಸಿದೆ.

ADVERTISEMENT

ಏಷ್ಯಾ ಷೇರುಪೇಟೆಗಳ ಪೈಕಿ ಜಪಾನ್‌ನ ನಿಕ್ಕಿ 225 ಸೂಚ್ಯಂಕ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದ್ದರೆ, ದಕ್ಷಿಣ ಕೊರಿಯಾದ ಕಾಸ್ಪಿ ಮತ್ತು ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕವು ಇಳಿಕೆ ಕಂಡಿತ್ತು.

ಗುರುವಾರ ಅಮೆರಿಕ ಮಾರುಕಟ್ಟೆಗಳು ಸ್ಥಿರವಾಗಿ ಕೊನೆಗೊಂಡಿದ್ದವು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ ₹5,045.36 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ದತ್ತಾಂಶಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.