ADVERTISEMENT

ಬ್ರೋಕರೇಜ್‌ ಮಾತು: ಟಾಟಾ ಪವರ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 22:22 IST
Last Updated 12 ನವೆಂಬರ್ 2025, 22:22 IST
   

ಟಾಟಾ ಪವರ್‌ ಕಂಪನಿಯ ಷೇರು ಮೌಲ್ಯವು ₹475ಕ್ಕೆ ತಲುಪಬಹುದು ಎಂದು ಬ್ರೋಕರೇಜ್‌ ಕಂಪನಿ ಜೆಎಂ ಫೈನಾನ್ಶಿಯಲ್‌ ಹೇಳಿದೆ. ಟಾಟಾ ಪವರ್ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ₹15,500 ಕೋಟಿ ವರಮಾನ ಗಳಿಸಿದೆ. ಕಂಪನಿಯ ತೆರಿಗೆ ನಂತರದ ಲಾಭವು (ಪಿಎಟಿ) ₹ 920 ಕೋಟಿ ಆಗಿದೆ.

ಕಂಪನಿಯ ವಹಿವಾಟುಗಳಲ್ಲಿ ಒಂದಾಗಿರುವ, ಮನೆಗಳ ಮೇಲ್ಛಾವಣಿ ಮೇಲಿನ ಸೌರವಿದ್ಯುತ್ ಫಲಕ ಅಳವಡಿಕೆಯು ವೇಗ ಪಡೆದುಕೊಂಡಿರುವುದು ಸೇರಿದಂತೆ ಹಲವು ಯೋಜನೆಗಳು ಈ ಕಂಪನಿಯ ಬಗ್ಗೆ ತಾನು ಧನಾತ್ಮಕ ಅಭಿಪ್ರಾಯವನ್ನು ಮುಂದುವರಿಸಿರುವುದಕ್ಕೆ ಕಾರಣವಾಗಿವೆ ಎಂದು ಜೆಎಂ ಫೈನಾನ್ಶಿಯಲ್ ಹೇಳಿದೆ. 2027–28ನೇ ಹಣಕಾಸು ವರ್ಷದವರೆಗೆ ಕಂಪನಿಯ ವರಮಾನದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು (ಸಿಎಜಿಆರ್‌) ಶೇ 8ರಷ್ಟು, ಕಂಪನಿಯ ತೆರಿಗೆ ನಂತರದ ಲಾಭದ ಸಿಎಜಿಆರ್‌ ಪ್ರಮಾಣವು ಶೇ 12ರಷ್ಟು ಇರುವ ನಿರೀಕ್ಷೆ ಇದೆ ಎಂದು ಜೆಎಂ ಫೈನಾನ್ಶಿಯಲ್ ಹೇಳಿದೆ.

ಬುಧವಾರದ ವಹಿವಾಟಿನ ಅಂತ್ಯಕ್ಕೆ ಟಾಟಾ ಪವರ್ ಕಂಪನಿಯ ಷೇರುಮೌಲ್ಯವು ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಇ) ₹388.55 ಆಗಿತ್ತು.

ADVERTISEMENT

(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.