ADVERTISEMENT

ವಾ ಟೆಕ್ ವಾಬಗ್ ಷೇರು ಮೌಲ್ಯ ₹1,900ಕ್ಕೆ ತಲುಪಬಹುದು: ಮೋತಿಲಾಲ್ ಓಸ್ವಾಲ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 22:22 IST
Last Updated 23 ಜುಲೈ 2025, 22:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನೀರಿನ ಶುದ್ಧೀಕರಣ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ‘ವಾ ಟೆಕ್ ವಾಬಗ್’ ಕಂಪನಿಯ ಷೇರು ಮೌಲ್ಯವು ₹1,900ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಕಂಪನಿ ಮೋತಿಲಾಲ್ ಓಸ್ವಾಲ್ ಹೇಳಿದೆ. ಈ ಕಂಪನಿಯು ನೀರಿನ ಶುದ್ಧೀಕರಣ ಉದ್ಯಮದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದೆ, ಈ ಉದ್ಯಮದಲ್ಲಿ ಗಟ್ಟಿಯಾದ ನೆಲೆಯನ್ನು ಹೊಂದಿದೆ, ನೀರಿನ ಮಾಲಿನ್ಯ ಹಾಗೂ ಶುದ್ಧ ನೀರಿನ ಅಲಭ್ಯತೆಯ ಕಾರಣದಿಂದಾಗಿ ಶುದ್ಧೀಕರಣ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.

ಈ ಕಂಪನಿಯು 125ಕ್ಕೂ ಹೆಚ್ಚು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿದೆ. ಹೆಚ್ಚಿನ ಲಾಭ ತಂದುಕೊಡುವ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದೆ. ಕಂಪನಿಯು 2027–28ನೇ ಹಣಕಾಸು ವರ್ಷದವರೆಗೆ ಶೇ 20ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು (ಸಿಎಜಿಆರ್) ಸಾಧಿಸುವ ಲಕ್ಷಣಗಳು ಕಾಣುತ್ತಿವೆ. ಕಂಪನಿಯು ಕಾರ್ಯತಂತ್ರದ ಭಾಗವಾಗಿ ರೂಪಿಸಿರುವ ಕೆಲವು ಯೋಜನೆಗಳು ಬೆಳವಣಿಗೆ ಮತ್ತು ಲಾಭದ ಮುನ್ನೋಟವನ್ನು ಹೆಚ್ಚಿಸಿವೆ ಎಂದು ಕೂಡ ಮೋತಿಲಾಲ್ ಓಸ್ವಾಲ್ ಹೇಳಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ವಾ ಟೆಕ್ ವಾಬಗ್ ಕಂಪನಿಯ ಷೇರುಮೌಲ್ಯವು ₹1,587 ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT