ADVERTISEMENT

ಜುಲೈ–ಸೆಪ್ಟೆಂಬರ್‌ನಲ್ಲಿ 9 ವಲಯದಲ್ಲಿ 3.10 ಕೋಟಿ ಉದ್ಯೋಗ ಸೃಷ್ಟಿಯಾಗಿದೆ: ಕೇಂದ್ರ

ಪಿಟಿಐ
Published 10 ಜನವರಿ 2022, 14:01 IST
Last Updated 10 ಜನವರಿ 2022, 14:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತಯಾರಿಕೆ, ನಿರ್ಮಾಣ ಸೇರಿದಂತೆ ಆಯ್ದ ಒಂಭತ್ತು ವಲಯಗಳಲ್ಲಿ 2021ರ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ಒಟ್ಟಾರೆ 3.10 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ಈ ಸಂಖ್ಯೆಯು ಏಪ್ರಿಲ್‌–ಜೂನ್‌ ಅವಧಿಯಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆಗಿಂತ 2 ಲಕ್ಷ ಅಧಿಕ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರು ತ್ರೈಮಾಸಿಕ ಉದ್ಯೋಗ ಸಮೀಕ್ಷೆಯ (ಕ್ಯುಇಎಸ್‌) ವರದಿಯನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ.

ತಯಾರಿಕೆ, ನಿರ್ಮಾಣ, ವ್ಯಾಪಾರ, ಸಾರಿಗೆ, ಶಿಕ್ಷಣ, ಆರೋಗ್ಯ, ಆತಿಥ್ಯ ಮತ್ತು ರೆಸ್ಟೋರೆಂಟ್‌, ಐ.ಟಿ./ಬಿಪಿಒ ಮತ್ತು ಹಣಕಾಸು ಸೇವೆಗಳ ವಲಯಗಳಲ್ಲಿ 2021ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ 3.08 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ಸೋಮವಾರ ಬಿಡುಗಡೆ ಆಗಿರುವುದು ಸರಣಿಯ ಎರಡನೇ ವರದಿ ಆಗಿದೆ. ಮೊದಲ ವರದಿಯು 2021ರ ಏಪ್ರಿಲ್‌–ಜೂನ್‌ ಅವಧಿಯದ್ದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.