ADVERTISEMENT

ಪೇಟಿಎಂ ಪೇಮೆಂಟ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

ಪಿಟಿಐ
Published 26 ಫೆಬ್ರುವರಿ 2024, 15:36 IST
Last Updated 26 ಫೆಬ್ರುವರಿ 2024, 15:36 IST
<div class="paragraphs"><p>ವಿಜಯ್ ಶೇಖರ್ ಶರ್ಮಾ</p></div>

ವಿಜಯ್ ಶೇಖರ್ ಶರ್ಮಾ

   

–ರಾಯಿಟರ್ಸ್ ಚಿತ್ರ

ನವದೆಹಲಿ: ಪೇಟಿಎಂ ಪೇಮೆಂಟ್ ಬ್ಯಾಂಕ್‌ ಲಿಮಿಟೆಡ್‌ನ ಅರೆಕಾಲಿಕ ಕಾರ್ಯನಿರ್ವಾಹಕೇತರ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ಅವರು ತಮ್ಮ ಸ್ಥಾನ ತೊರೆದಿದ್ದಾರೆ. ಬೆನ್ನಲ್ಲೇ ಹೊಸ ನಿರ್ದೇಶಕ ಮಂಡಳಿಯನ್ನು ರಚಿಸಲಾಗಿದೆ.

ADVERTISEMENT

ಸೆಂಟ್ರಲ್ ಬ್ಯಾಂಕ್ ಆಫ್‌ ಇಂಡಿಯಾದ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಶ್ರೀಧರ್‌, ನಿವೃತ್ತ ಐಎಎಸ್ ಅಧಿಕಾರಿ ದೇಬೇಂದ್ರನಾಥ್‌ ಸಾರಂಗಿ, ಬ್ಯಾಂಕ್ ಆಫ್ ಬರೋಡಾದ ಮಾಜಿ ನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಗರ್ಗ್ ಹಾಗೂ ಮಾಜಿ ಐಎಎಸ್‌ ಅಧಿಕಾರಿ ರಜನಿ ಸೇಖ್ರಿ ಸಿಬಲ್ ಅವರನ್ನೊಳಗೊಂಡ ನಿರ್ದೇಶಕ ಮಂಡಳಿಯನ್ನು ರಚಿಸಲಾಗಿದೆ ಎಂದು ಷೇರು ಪೇಟೆಗೆ ಪೇಟಿಎಂ ಮಾಹಿತಿ ನೀಡಿದೆ.

ಇವರು ಇತ್ತೀಚೆಗಷ್ಟೇ ಸ್ವತಂತ್ರ ನಿರ್ದೇಶಕರಾಗಿ ಕಂಪನಿಗೆ ಸೇರಿದ್ದರು.

‘ವಿಜಯ್ ಶೇಖರ್ ಶರ್ಮಾ ಅವರು ನಿರ್ದೇಶಕ ಮಂಡಳಿಗೂ ರಾಜೀನಾಮೆ ಸಲ್ಲಿಸಿದ್ದಾರೆ. ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದೆ’ ಎಂದು ಪೇಟಿಎಂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.