ADVERTISEMENT

ದಿನದ ಸೂಕ್ತಿ: ನವರಾತ್ರಿಯಲ್ಲಿ ಶಕ್ತಿಯ ಆರಾಧನೆ

ಎಸ್.ಸೂರ್ಯಪ್ರಕಾಶ ಪಂಡಿತ್
Published 17 ಅಕ್ಟೋಬರ್ 2020, 2:40 IST
Last Updated 17 ಅಕ್ಟೋಬರ್ 2020, 2:40 IST
ದುರ್ಗಾ
ದುರ್ಗಾ   

ಯಾ ದೇವೀ ಸರ್ವಭೂತೇಷು ಬುದ್ಧಿರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ಯಾ ದೇವೀ ಸರ್ವಭೂತೇಷು ನಿದ್ರಾರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ಯಾ ದೇವೀ ಸರ್ವಭೂತೇಷು ಕ್ಷುಧಾರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ADVERTISEMENT

ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ಯಾ ದೇವೀ ಸರ್ವಭೂತೇಷು ತೃಷ್ಣಾರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ಯಾ ದೇವೀ ಸರ್ವಭೂತೇಷು ಕ್ಷಾಂತಿರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ಯಾ ದೇವೀ ಸರ್ವಭೂತೇಷು ಲಜ್ಜಾರೂಪೇಣ ಸಂಸ್ಥಿತಾ ।

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ಯಾ ದೇವೀ ಸರ್ವಭೂತೇಷು ಶಾಂತಿರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ಯಾ ದೇವೀ ಸರ್ವಭೂತೇಷು ಶ್ರದ್ಧಾರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ಯಾ ದೇವೀ ಸರ್ವಭೂತೇಷು ಕಾಂತಿರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ।।

ಯಾ ದೇವೀ ಸರ್ವಭೂತೇಷು ಲಕ್ಷ್ಮೀರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ।।

ಯಾ ದೇವೀ ಸರ್ವಭೂತೇಷು ಸ್ಮೃತಿರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ।।

ಯಾ ದೇವೀ ಸರ್ವಭೂತೇಷು ದಯಾರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ಯಾ ದೇವೀ ಸರ್ವಭೂತೇಷು ತುಷ್ಟಿರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ।।

ಇಂದಿನಿಂದ ನವರಾತ್ರಿ ಆರಂಭವಾಗುತ್ತಿದೆ; ಶಕ್ತಿಯ ವಿವಿಧ ಸ್ವರೂಪಗಳನ್ನು ಈ ಪರ್ವಕಾಲದಲ್ಲಿ ಆರಾಧಿಸಲಾಗುತ್ತದೆ.

ನಮ್ಮ ಜೀವನಕ್ಕೆ ಬೇಕಾದ ಎಲ್ಲ ವಿಧದ ಶಕ್ತಿಯನ್ನೂ ನಮ್ಮ ಸಂಸ್ಕೃತಿಯಲ್ಲಿ ಮಾತೃಸ್ವರೂಪದಲ್ಲಿ ಪೂಜಿಸಲಾಗಿದೆ. ನವರಾತ್ರಿಯಲ್ಲಿ ದುರ್ಗಾಸಪ್ತಶತಿಯ ಪಾರಾಯಣ ಮಾಡುವ ಪದ್ಧತಿ ಉಂಟು. ಈ ಗ್ರಂಥದಲ್ಲಿ ’ಅಪರಾಜಿತಾಸ್ತೋತ್ರ‘ ಎಂದು ಹೆಸರನ್ನು ಪಡೆದಿರುವ ಶ್ಲೋಕಗಳಲ್ಲಿ ಕೆಲವೊಂದನ್ನು ಮೇಲೆ ಉಲ್ಲೇಖಿಸಲಾಗಿದೆ.

ಇಲ್ಲಿ ಉಲ್ಲೇಖಿಸಿರುವ ಮೊದಲ ಶ್ಲೋಕದ ತಾತ್ಪರ್ಯ ಹೀಗೆ:

‘ಯಾವ ದೇವಿಯು ಎಲ್ಲ ಜೀವಿಗಳಲ್ಲಿಯೂ ಬುದ್ಧಿರೂಪದಲ್ಲಿ ನೆಲಸಿರುವಳೋ ಅವಳಿಗೆ ಮತ್ತೆ ಮತ್ತೆ ನಮಸ್ಕಾರ.’

ದೇವಿಯು ಯಾವ ಯಾವ ರೂಪದಲ್ಲಿ ಎಲ್ಲ ಜೀವಿಗಳಲ್ಲಿ ನೆಲಸಿದ್ದಾಳೆಂದು ‘ದುರ್ಗಾಸಪ್ತಶತೀ’ ಪಟ್ಟಿ ಮಾಡಿದೆ – ಎನ್ನುವುದೇ ಸ್ವಾರಸ್ಯಕರವಾದುದು.

ನಿದ್ರೆ, ಹಸಿವು, ಶಕ್ತಿ, ಬಯಕೆ, ಕ್ಷಮೆ, ನಾಚಿಕೆ, ಶಾಂತಿ, ಶ್ರದ್ಧೆ, ಕಾಂತಿ, ಸಂಪತ್ತು, ನೆನಪು, ದಯೆ, ತೃಪ್ತಿ, ತಾಯಿ – ಹೀಗೆ ನಮ್ಮ ಜೀವನಕ್ಕೆ ಬೇಕಾದ ಬೌದ್ಧಿಕ, ಆಧ್ಯಾತ್ಮಿಕ, ಭಾವನಾತ್ಮಕ, ದೈಹಿಕ ಶಕ್ತಿಗಳನ್ನೂ ಇಲ್ಲಿ ಆ ಮಹಾಶಕ್ತಿಯಲ್ಲಿ ಕಾಣಲಾಗಿದೆ.

ಶಕ್ತಿ ಎಂದರೆ ಚೈತನ್ಯ; ಅದು ಸೃಷ್ಟಿಯಲ್ಲಿ ಎಲ್ಲೆಲ್ಲೂ ಇರುವಂಥದ್ದೇ; ಸೃಷ್ಟಿಗೆ ಮೂಲವೇ ಅದು. ಆ ಶಕ್ತಿಯ ಮಹತ್ವವನ್ನು ಅರಿತು, ಅದಕ್ಕೆ ತಕ್ಕ ರೀತಿಯಲ್ಲಿ ನಮ್ಮ ಜೀವನವಿಧಾನವನ್ನು ರೂಪಿಸಿಕೊಳ್ಳಬೇಕೆಂಬ ಆಶಯವೂ ನವರಾತ್ರಿಯ ಪರ್ವದಲ್ಲಿ ಅಡಕವಾಗಿದೆ. ನವತ್ವವನ್ನು, ಎಂದರೆ ನಮ್ಮ ಬದುಕಿಗೆ ಹೊಸತನ್ನು ನೀಡುತ್ತದೆ ಎಂದೂ ನವರಾತ್ರಿಯನ್ನು ಅರ್ಥೈಸಬಹುದು.

ನಮ್ಮ ಎಲ್ಲರ ಬದುಕು ಹೊಸತನದಿಂದ ಹೊಸ ಚೈತನ್ಯವನ್ನು ಪಡೆಯುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.