ಅತ್ತ ಆಷಾಢದ ಸಂಭ್ರಮ. ಇತ್ತ ಆಗಸದಲ್ಲಿ ಮೋಡಗಳ ಮೇಳ. ಈ ಮಧ್ಯೆ ವರುಣನ ಸಿಂಚನ. ಇಂತಹ ತಂಪಾದ ವಾತಾವರಣದ ಮಧ್ಯೆಯೇ ಮಹಾರಾಷ್ಟ್ರದ ಪಂಢರಪುರದ ವಿಠ್ಠಲನ ಸನ್ನಿಧಾನದ ಮಾರ್ಗದುದ್ದಕ್ಕೂ ವಾರಕರಿ ಸಂತ ಪರಂಪರೆಯ ಅನಾವರಣ. ನೂರಾರು ಕಿಲೋಮೀಟರ್ ದೂರದಿಂದ ಉತ್ಸಾಹದಿಂದ ಹೆಜ್ಜೆ ಹಾಕುತ್ತ ಬಂದ ಲಕ್ಷಾಂತರ ಜನರಿಂದ ಹರಿದ ಭಕ್ತಿಯ ಹೊಳೆ...
ಆಷಾಢ ಏಕಾದಶಿ ಪ್ರಯುಕ್ತ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ, ತೆಲಂಗಾಣದಿಂದ ಬಂದಿದ್ದ 15 ಲಕ್ಷಕ್ಕೂ ಅಧಿಕ ಭಕ್ತರು, ಚಂದ್ರಭಾಗ ನದಿಯಲ್ಲಿ ಸ್ನಾನ ಮಾಡಿ ಸಂಭ್ರಮಿಸಿದರು. ಅಲ್ಲಿ ಎತ್ತ ನೋಡಿದರೂ ಜನವೋ ಜನ. ಕಿವಿಗೆ ವಿಠ್ಠಲನದ್ದೇ ಗುಣಗಾನದ ಇಂಪು. ಗ್ರಾಮೀಣ ಸೊಗಡಿನ ಪ್ರತಿಫಲನ. ಭಜನೆ, ಕೀರ್ತನೆ, ಆರಾಧನೆ ಮೂಲಕ ವಾರಕರಿಗಳಿಂದ ಸಾಂಸ್ಕೃತಿಕ ರಸದೌತಣ. ಹೀಗೆ ಹತ್ತಾರು ವೈವಿಧ್ಯಮಯ ಸನ್ನಿವೇಶಗಳನ್ನು ‘ಪ್ರಜಾವಾಣಿ’ಯ ಕಲಬುರಗಿಯ ಹಿರಿಯ ಛಾಯಾಗ್ರಾಹಕ ತಾಜುದ್ದೀನ್ ಆಜಾದ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.