ADVERTISEMENT

PHOTOS | ಮಥುರಾ ಹೋಳಿ ನೋಡ ಕೂಡ್ಯಾವ ಬಣ್ಣದ ಮೋಡ

ಯುಗಾದಿಯ ಹೊಸ್ತಿಲಲ್ಲಿ ಪ್ರಕೃತಿ ಚಳಿಯ ಹೊದಿಕೆಯಿಂದೆದ್ದು ಮತ್ತೆ ಮೈತುಂಬಿಕೊಂಡಿದೆ. ಎಲೆಗಳೇ ಹೂವುಗಳ ಬಣ್ಣತುಂಬಿ ನಿಸರ್ಗವು ರಂಗು ರಂಗಾಗಿದೆ. ಈ ಸಂಭ್ರಮಕ್ಕೆ ಜನರೂ ಜೊತೆಯಾಗಿ; ಹೋಳಿಯ ನೆಪದಲ್ಲಿ ಬಣ್ಣದೋಕುಳಿಯಲ್ಲಿ ಈಜಲು ಸಿದ್ಧರಾಗಿದ್ದಾರೆ. ಕೃಷ್ಣ–ರಾಧೆಯ ನೆನಪಿನಲ್ಲಿ ಬಣ್ಣವನೆರಚಿಕೊಂಡು ಜನರು ಸಂಭ್ರಮಿಸುವುದನ್ನು ಮನಸಲ್ಲಿ ಸೆರೆಹಿಡಿದು, ಮಸೂರದಲ್ಲಿ ತುಂಬಿ ಕೊಟ್ಟಿದ್ದಾರೆ ಪುಣೆಯ ಖ್ಯಾತ ಛಾಯಾಗ್ರಾಹಕ ಅರುಣ್‌ ಸಹಾ. ಶ್ರೀಕೃಷ್ಣ ಓಡಾಡಿದ ಮಥುರಾದ ನಂದಗಾಂವ್‌ನ ಜನರು ರಾಧೆಯ ಊರು ಬರಸಾನಾಗೆ ಬಂದು ಇಲ್ಲಿನ ಜನರ ಜೊತೆಗೂಡಿ ಬಣ್ಣ ಎರಚಾಡುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಭಾರತದಿಂದಷ್ಟೇ ಅಲ್ಲ ವಿದೇಶಗಳಿಂದಲೂ ಜನ ಬರುತ್ತಾರೆ. ಇಲ್ಲಿ ನಡೆಯುವುದು ಕೇವಲ ಬಣ್ಣಗಳ ಎರೆಚಾಟವಲ್ಲ. ಹಲವು ವಿಶೇಷಗಳು ಇಲ್ಲಿವೆ. ಇಲ್ಲಿ ವಿಧವೆಯರೂ ತಮ್ಮ ದುಃಖವನ್ನು ಬಣ್ಣಗಳಿಂದ ಮರೆಮಾಚುತ್ತಾರೆ, ಆಧುನಿಕ ರಾಧೆಯರು ತಮ್ಮ ಕೃಷ್ಣನಿಗೆ ಲಾಠಿಯಿಂದ ಬಾರಿಸುವುದನ್ನು ನೋಡುವುದೇ ಖುಷಿ, ಬಣ್ಣದ ಸಮುದ್ರದಲ್ಲಿ ಜಾತಿ, ಧರ್ಮಕ್ಕೆಲ್ಲಿ ಜಾಗ....ಈ ಬಣ್ಣದ ಲೋಕದ ವರ್ಣನೆಯನ್ನು ಚಿತ್ರಗಳೇ ಹೇಳುತ್ತವೆ ನೋಡಿ...

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 15:34 IST
Last Updated 4 ಮಾರ್ಚ್ 2023, 15:34 IST
ನಂದಗಾಂವ್‌ನ ಶ್ರೀಜಿ ದೇವಸ್ಥಾನದ ಆವರಣದಲ್ಲಿ ನಂದಗಾಂವ್‌–ಬರಸಾನಾ ಜನರ ಹೋಳಿ ಸಂಭ್ರಮ
ನಂದಗಾಂವ್‌ನ ಶ್ರೀಜಿ ದೇವಸ್ಥಾನದ ಆವರಣದಲ್ಲಿ ನಂದಗಾಂವ್‌–ಬರಸಾನಾ ಜನರ ಹೋಳಿ ಸಂಭ್ರಮ   
ಹೋಳಿ ಸಂಭ್ರಮ
ಹೋಳಿ ಸಂಭ್ರಮದಲ್ಲಿ ನಂದಗಾಂವ್‌ನ ರಸ್ತೆಗಳೆಲ್ಲವೂ ಬಣ್ಣದ ಸಮುದ್ರವಾಗುತ್ತವೆ
ಉತ್ತರ ಪ್ರದೇಶದ ಖ್ಯಾತ ಬಾಂಕೆ ಬಿಹಾರಿ ಮಂದಿರದಲ್ಲಿ ಅರ್ಚಕರು ಮತ್ತು ಭಕ್ತರು ಪರಸ್ಪರ ಬಣ್ಣವನೆರಚಿಕೊಂಡು ಸಂಭ್ರಮಿಸುತ್ತಾರೆ
ಬಣ್ಣವನೆರಚಿ ಓಡುತ್ತಿದ್ದ ಶ್ರೀಕೃಷ್ಣನಿಗೆ ರಾಧೆ ಹಾಗೂ ಆಕೆಯ ಸ್ನೇಹಿತೆಯರು ಹೀಗೆ ಹೊಡೆಯುತ್ತಿದ್ದರಂತೆ...
ಉತ್ತರ ಪ್ರದೇಶದ ವೃಂದಾವನದಲ್ಲಿ ವಿಧವೆಯರೂ ಬಣ್ಣದೋಕುಳಿಯಲ್ಲಿ ಮಿಂದೇಳುತ್ತಾರೆ
ಅರುಣ್‌ ಸಹಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.