ADVERTISEMENT

ಶನಿವಾರದಂದು ಶನೈಶ್ಚರನನ್ನು ಮನೆಯಲ್ಲೇ ಪೂಜಿಸಬಹುದೇ?

ಎಲ್.ವಿವೇಕಾನಂದ ಆಚಾರ್ಯ
Published 8 ಆಗಸ್ಟ್ 2025, 9:26 IST
Last Updated 8 ಆಗಸ್ಟ್ 2025, 9:26 IST
   

ಭಗವಂತ ಶ್ರೀ ಶನಿ ದೇವರನ್ನು ಹಿಂದೂ ಪುರಾಣದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಸರ್ವೋಚ್ಚ ದೇವ ಎಂದು ಪರಿಗಣಿಸಲಾಗಿದೆ.

ಶ್ರೀ ಶನಿದೇವರು ಭಗವಂತ ಶ್ರೀ ಸೂರ್ಯನಾರಾಯಣ ಮತ್ತು ಛಾಯಾ ದೇವಿ ಅಮ್ಮನವರಿಗೆ ಜನಿಸಿದವರು. ಆದ್ದರಿಂದ ಶನಿ ದೇವರನ್ನು ಛಾಯಾಪುತ್ರ ಎಂದೂ ಕರೆಯಲಾಗುತ್ತದೆ. ವಾರದ ಪ್ರತೀ ಶನಿವಾರದಂದು ಇವರನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.

ಮನೆಯಲ್ಲಿ ಶನಿ ದೇವರನ್ನು ಪೂಜಿಸಬಹುದೇ?

ADVERTISEMENT

ಮನೆಯಲ್ಲಿ ಶನಿ ದೇವರನ್ನು ಪೂಜೆ ಮಾಡಬಹುದೇ ಅಥವಾ ಬೇಡವೇ ಎನ್ನುವ ಗೊಂದಲ ನಿಮ್ಮಲ್ಲಿಯೂ ಇರಬಹುದು. ಸಾಮಾನ್ಯವಾಗಿ ಶನೈಶ್ಚರನನ್ನು ನಾವು ದೇವಾಲಯಗಳಲ್ಲಿ ಪೂಜಿಸುವುದನ್ನು ನೋಡಿರುತ್ತೇವೆ. ಎಲ್ಲಾ ಹಿಂದೂ ದೇವರು ಮತ್ತು ದೇವತೆಗಳಲ್ಲಿ ಶನಿಯನ್ನು ಅತ್ಯಂತ ಭಯಭೀತಿಯಿಂದ ಪರಿಗಣಿಸುವ ಕಾರಣದಿಂದ ಶನಿಯನ್ನು ಮನೆಯಲ್ಲಿ ಪೂಜಿಸಬಾರದೆನ್ನುವ ನಂಬಿಕೆಯಿದೆ.

ಶನಿಯ ವಿಗ್ರಹವನ್ನು ಅಥವಾ ಫೋಟೋವನ್ನು ಪೂಜಿಸುವುದರಿಂದ ಅಥವಾ ಪ್ರಾರ್ಥಿಸುವುದರಿಂದ ಆ ಮನೆಯಲ್ಲಿ ದುಃಖ –ಚಿಂತೆ ದೂರವಾಗುತ್ತದೆ.

ಆದರೆ ಮನೆಯಲ್ಲಿ ಶನಿಯನ್ನು ಪೂಜಿಸುವಾಗ ನಾವು ಕೆಲವೊಂದು ವಿಧಿ - ವಿಧಾನಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ಅನುಸರಿಸಬೇಕಾಗುತ್ತದೆ. ನೀವೂ ಕೂಡ ಈ ಧಾರ್ಮಿಕ ವಿಧಿ - ವಿಧಾನಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಶನಿದೇವರನ್ನು ಪೂಜಿಸಬಹುದು ಹಾಗೂ ವಿಗ್ರಹ, ಫೋಟೋವನ್ನು ಕೂಡ ಇಟ್ಟುಕೊಳ್ಳಬಹುದು.

ಮನೆಯಲ್ಲಿ ಶನಿದೇವನಿಗೆ ಪೂಜೆ ಮಾಡುವ ವಿಧಾನ

  • ನಿಮ್ಮ ಮನೆಯ ದೇವರ ಕೋಣೆಯಲ್ಲಿ ಶನಿ ದೇವರ ಪ್ರತಿಮೆಯನ್ನು ಅಥವಾ ಫೋಟೊವನ್ನು ಇಡಬಹುದು

  • ಶನಿ ದೇವರನ್ನು ಶ್ರಾವಣ ಶನಿವಾರದಂದು ಮಾತ್ರವಲ್ಲದೆ ಯಾವುದೇ ಶನಿವಾರದಂದು ಶಿವನನ್ನು, ಹನುಮಂತನನ್ನು ಮತ್ತು ಗಣೇಶನೊಂದಿಗೆ ಶನಿ ದೇವರನ್ನು ಪೂಜಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.

  • ಶನಿ ದೇವರನ್ನು ಪೂಜಿಸುವ ಮುನ್ನ ಸ್ನಾನ ಮಾಡುವ ನೀರಿಗೆ ಕಪ್ಪು ಎಳ್ಳು ಮತ್ತು ಎಳ್ಳೆಣ್ಣೆಯನ್ನು ಬೆರೆಸಿ ಸ್ನಾನ ಮಾಡಬೇಕು.

  • ಶನಿ ದೇವರನ್ನು ಮೆಚ್ಚಿಸಲು ಸ್ನಾನ ಮಾಡಿದ ನಂತರ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬೇಕು.

  • ಶ್ರಾವಣ ಶನಿವಾರದಂದು ಕಠಿಣ ಉಪವಾಸ ವ್ರತವನ್ನು ಕೈಗೊಳ್ಳಬೇಕು.

  • ಮಾನಸಿಕ ಶಾಂತಿಗಾಗಿ ಮತ್ತು ನೆಮ್ಮದಿಗಾಗಿ ಈ ದಿನ ಧ್ಯಾನವನ್ನು ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.