
ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಭೇಟಿ ನೀಡುವವರು 18 ಮೆಟ್ಟಿಲುಗಳನ್ನು ಏರುತ್ತಾರೆ. ಪ್ರತಿ ಮೆಟ್ಟಿಲಲ್ಲೂ ಒಂದೊಂದು ವಿಶೇಷತೆ ಇರುತ್ತದೆ. ಹಾಗಾದರೆ, 18 ಮೆಟ್ಟಿಲುಗಳ ಮಹತ್ವವೇನು ಎಂಬುದನ್ನು ತಿಳಿಯೋಣ.
ಮೊದಲನೆಯ 5ಮೆಟ್ಟಿಲುಗಳು ಪಂಚೇಂದ್ರಿಯಗಳನ್ನು ಸೂಚಿಸುತ್ತವೆ. ಕಿವಿ, ಕಣ್ಣು, ಮೂಗು, ಬಾಯಿ, ನಾಲಿಗೆ ಮತ್ತು ಚರ್ಮ.
ನಂತರದ 8 ಮೆಟ್ಟಿಲುಗಳು ಹರಿಶಡ್ವರ್ಗಗಳ ಸಂಖೇತವಾಗಿವೆ. ಅವುಗಳೆಂದರೆ, ಕಾಮ, ಕ್ರೋಧ, ಲೋಭ, ಮೋಹ, ಮದ ,ಮತ್ಸರ, ಹೆಗ್ಗಳಿಕೆ ಹಾಗೂ ಅಸೂಯೆ.
ಮುಂದಿನ 3 ಮೆಟ್ಟಿಲುಗಳು ಸತ್ವ, ರಜಸ್ ಹಾಗೂ ತಮಸ್ ಗುಣಗಳನ್ನು ಸೂಚಿಸುತ್ತವೆ.
ನಂತರದ ಎರಡು ಮೆಟ್ಟಿಲುಗಳು ವಿದ್ಯೆ ಮತ್ತು ಅಜ್ಞಾನವನ್ನು ಸೂಚಿಸುತ್ತವೆ.
ಹೀಗಾಗಿ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪನ ದರ್ಶನ ಮಾಡುವವರು ಮುಕ್ತಿ ಪಡೆಯುತ್ತಾರೆ ಎಂಬ ನಂಬಿಕೆ ಇದೆ.
18 ಮೆಟ್ಟಲುಗಳನ್ನು ಈ ರೀತಿಯಾಗಿಯೂ ಕರೆಯಲಾಗುತ್ತದೆ.
ನಾಲ್ಕು - ವೇದಗಳು
ಆರು- ವೇದಾಂಗಗಳು
ಆರು- ದರ್ಶನಗಳು
ಎರಡು- ಮಹಾಕಾವ್ಯಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.