ADVERTISEMENT

ತ್ಯಾಗರಾಜರ ಜಯಂತಿ; ಅವರ ಜೀವನಗಾಥೆ ಬಗ್ಗೆ ಮಾಹಿತಿ ಇಲ್ಲಿದೆ

ಎಲ್.ವಿವೇಕಾನಂದ ಆಚಾರ್ಯ
Published 7 ಜನವರಿ 2026, 6:39 IST
Last Updated 7 ಜನವರಿ 2026, 6:39 IST
<div class="paragraphs"><p>ತ್ಯಾಗರಾಜ ಸ್ವಾಮಿ (ಪ್ರಾತಿನಿಧಿಕ ಚಿತ್ರ)</p></div>

ತ್ಯಾಗರಾಜ ಸ್ವಾಮಿ (ಪ್ರಾತಿನಿಧಿಕ ಚಿತ್ರ)

   

ನಾದೋಪಾಸಕ ತ್ಯಾಗರಾಜ ಕ್ರಿಸ್ತ ಶಕ 1767ರಲ್ಲಿ ವೈಶಾಖ ಶುಕ್ಲ ಷಷ್ಠಿ ಅಥವಾ ಸಪ್ತಮಿಯಂದು ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರವಾರು ಎಂಬ ಗ್ರಾಮದಲ್ಲಿ ಜನಿಸಿದರು.

ಪ್ರಾಪಂಚಿಕ ಸುಖಕ್ಕಿಂತ ರಾಮನ ಸನ್ನಿಧಿಯೆ ಶ್ರೇಷ್ಠವೆಂದು ಸಾರಿದ ತ್ಯಾಗರಾಜರ ಜೀವನಗಾಥೆ ಬಗ್ಗೆ ಮಾಹಿತಿ ಇಲ್ಲಿದೆ.

ADVERTISEMENT

ತಿರುವಯೂರಿನ ಆರಾಧ್ಯ ದೈವ ತ್ಯಾಗರಾಜ ಸ್ವಾಮಿಯ ಅನುಗ್ರಹದಿಂದ ಒಂದು ಮಗು ಜನಿಸುತ್ತದೆ. ಅವರ ತಂದೆ ತಾಯಿ ಆ ಮಗುವಿಗೆ ತ್ಯಾಗರಾಜ ಎಂದು ನಾಮಕರಣ ಮಾಡಿದರು. ಮುಂದೆ ತ್ಯಾಗರಾಜರು ಲೋಕ ಕಲ್ಯಾಣ ಹಾಗೂ ಆಧ್ಯಾತ್ಮಿಕತೆಯನ್ನು ತಮ್ಮ ಹಾಡುಗಳ ಮೂಲಕ ಸಾರಿದರು. ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಉಳ್ಳವರಾಗಿದ್ದ ತ್ಯಾಗರಾಜರು ಪ್ರತಿನಿತ್ಯ ಪೂಜಾ ಸಮಯದಲ್ಲಿ ಹಾಡುಗಳನ್ನು ಹಾಡುತ್ತಿದ್ದರು. ಪುರಂದರದಾಸರ ಹಾಗೂ ರಾಮದಾಸರ ಹಾಡುಗಳಿಂದ ಪ್ರೇರಿತರಾಗಿದ್ದ ಅವರು, ಮಹಾರಾಜರ ಆಸ್ಥಾನ ವಿದ್ವಾಂಸರಾಗಿದ್ದ ಸೋಂದಿ ವೆಂಕಟಸುಬ್ಬಯ್ಯ ಮತ್ತು ಸೋಂದಿ ವೆಂಕಟರಮಣಯ್ಯ ಅರವರ ಬಳಿ ಸಂಗೀತ ಪಾಠವನ್ನು ಕಲಿಯಲು ಆರಂಭಿಸಿದರು. ಬಹಳ ಬೇಗನೆ ತ್ಯಾಗರಾಜರು ಸಂಗೀತದಲ್ಲಿ ನೈಪುಣ್ಯತೆ ಪಡೆದರು.

ತಮ್ಮ ಇಷ್ಟದೈವವಾದ ಶ್ರೀರಾಮನ ನಾಮವನ್ನು ತಿರುವಾಯೂರಿನ ಬೀದಿ ಬೀದಿಗಳಲ್ಲಿ ಹಾಡಲಾರಂಭಿಸಿದರು. ಇದನ್ನೇ ತಮ್ಮ ವೃತ್ತಿಯಾಗಿ ಮಾಡಿಕೊಂಡರು. ಸರಳ ಬದುಕನ್ನು ನಡೆಸಿದ ಅವರು ಸಂಪತ್ತಿನ ಬಗ್ಗೆ ಎಂದಿಗೂ ಆಸಕ್ತಿ ತೋರಲಿಲ್ಲ.

ಶರಭೋಜ ಮಹಾರಾಜರು ತ್ಯಾಗರಾಜರ ಮನೆಗೆ ವಜ್ರ, ವೈಡೂರ್ಯ ಹಾಗೂ ಸಂಪತ್ತನ್ನು ತಂದರು. ಇದನ್ನು ನೋಡಿದ ಮನೆಯವರಿಗೆಲ್ಲರಿಗೂ ಸಂತೋಷವಾಯಿತು. ಆದರೆ ತ್ಯಾಗರಾಜರ ಮನಸ್ಸು ಬದಲಾಗಲಿಲ್ಲ. ನನಗೆ ಇದೆಲ್ಲ ಬೇಡ ಎಂದು ನೇರವಾಗಿ ತಿರಸ್ಕಾರ ಮಾಡಿದರು. ಪ್ರಾಪಂಚಿಕ ಸುಖಕ್ಕಿಂತ ರಾಮನ ಸನ್ನಿಧಿಯೆ ಶ್ರೇಷ್ಠವೆಂದು ಮಹಾರಾಜರಿಗೆ ‌ಮನದಟ್ಟು ಮಾಡಿದರು.

ಸಂಗೀತವನ್ನೇ ತನ್ನ ಜೀವನದ ಉಸಿರಾಗಿಸಿಕೊಂಡು, ಕೈವಾರದ ತಾತಯ್ಯನವರಂತೆ ಹಲವಾರು ಭಕ್ತಿ ಪ್ರಧಾನ ಪವಾಡಗಳನ್ನು ಮಾಡುತ್ತ, ಕೊನೆಯಲ್ಲಿ ದೈವ ಸಾನಿಧ್ಯವನ್ನು ಹೊಂದಿದರು.

ಇಂದಿಗೂ ತಮಿಳುನಾಡಿನ ತಂಜಾವೂರು ಭಾಗದಲ್ಲಿ ಈ ದಿನದಂದು ತ್ಯಾಗರಾಜರ ಜಯಂತಿಯನ್ನು ಆಚರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.