ADVERTISEMENT

ವಚನಾಮೃತ: ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು

ಡಾ.ಅಲ್ಲಮಪ್ರಭು ಸ್ವಾಮೀಜಿ
Published 29 ಸೆಪ್ಟೆಂಬರ್ 2021, 6:25 IST
Last Updated 29 ಸೆಪ್ಟೆಂಬರ್ 2021, 6:25 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

––––––

ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯಾ

ADVERTISEMENT

ಚಂದ್ರ ಕುಂದೆ, ಕುಂದುವುದಯ್ಯಾ

ಚಂದ್ರಂಗೆ ರಾಹು ಅಡ್ಡಬಂದಲ್ಲಿ ಅಂಬುಧಿ ಬೊಬ್ಬಿಟ್ಟಿತ್ತೆ, ಅಯ್ಯಾ?

ಅಂಬುಧಿಯ ಮುನಿ ಆಪೋಶನವ ಕೊಂಬಲ್ಲಿ

ಚಂದ್ರಮನಡ್ಡ ಬಂದನೆ, ಅಯ್ಯಾ?

ಆರಿಗಾರೂ ಇಲ್ಲ; ಕೆಟ್ಟವಂಗೆ ಕಳೆ ಇಲ್ಲ!

ಜಗದ ನಂಟ ನೀನೆ ಅಯ್ಯಾ, ಕೂಡಲಸಂಗಮದೇವಾ!

ಮಾನವನ ಸಂಬಂಧಗಳು ಶಾಶ್ವತವಲ್ಲ ಎನ್ನುವುದನ್ನು ಬಸವಣ್ಣನವರು ಚಂದ್ರ ಹಾಗೂ ಸಮುದ್ರದ ಉದಾಹರಣೆಯ ಮುಖಾಂತರ ಈ ವಚನದ ಮೂಲಕ ವಿವರಿಸಿದ್ದಾರೆ. ಆಕಾಶದಲ್ಲಿ ಚಂದ್ರಮನು ಬೆಳೆಯುತ್ತಾ ಹೋದಂತೆ ಸಮುದ್ರವು ಕೂಡ ಉಕ್ಕೇರುತ್ತದೆ. ಚಂದ್ರಮನು ಇಳಿಯುತ್ತಾ ಬಂದಂತೆ ಸಮುದ್ರವೂ ಇಳಿಯುತ್ತದೆ. ಚಂದ್ರಗ್ರಹಣವಾದ ಸಂದರ್ಭದಲ್ಲಿ ರಾಹು ಚಂದ್ರಮನನ್ನು ನುಂಗಿದಾಗ ಸಮುದ್ರ ಏರುವುದೂ ಇಲ್ಲ; ಇಳಿಯುವುದೂ ಇಲ್ಲ. ಸಮುದ್ರವನ್ನು ಅಗಸ್ತ್ಯ ಮುನಿಯು ಆಪೋಶನ ಮಾಡಿದಾಗ ಚಂದ್ರಮನು ಕೂಡ ಯಥಾಪ್ರಕಾರವಾಗಿ ಇದ್ದನು. ಕಷ್ಟಗಳು ಬಂದಾಗ ಯಾರಿಗೆ ಯಾರೂ ಆಗುವುದಿಲ್ಲ. ಅವರರವರ ಸಮಸ್ಯೆಗಳಿಗೆ ಅವರವರೆ ಪರಿಹಾರ ಕಂಡುಕೊಳ್ಳಬೇಕು. ಆರಿಗಾರೂ ಇಲ್ಲ; ಕೆಟ್ಟವಂಗೆ ಕಳೆ ಇಲ್ಲ! ಜಗದ ನಂಟ ನೀನೆ ಅಯ್ಯಾ. ಜಗದರಕ್ಷಕನೆ ಭಗವಂತನಿರುವಾಗ ಎಲ್ಲವನ್ನೂ ಅವನು ವೀಕ್ಷಿಸುತ್ತಿದ್ದಾನೆ ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.