ADVERTISEMENT

ಸಕಲವೂ ನೀನೇ ಎಂಬ ಭಾವವಿರಲಿ

ಡಾ.ಅಲ್ಲಮಪ್ರಭು ಸ್ವಾಮೀಜಿ
Published 29 ಡಿಸೆಂಬರ್ 2021, 8:50 IST
Last Updated 29 ಡಿಸೆಂಬರ್ 2021, 8:50 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

–––––

ಎನ್ನ ವಾಮ ಕ್ಷೇಮ ನಿಮ್ಮದಯ್ಯಾ

ADVERTISEMENT

ಎನ್ನ ಹಾನಿ ವೃದ್ಧಿ ನಿಮ್ಮದಯ್ಯಾ

ಎನ್ನ ಮಾನಪಮಾನ ನಿಮ್ಮದಯ್ಯಾ

ಬಳ್ಳಿಗೆ ಕಾಯಿ ದಿಮ್ಮಿತ್ತೆ ಕೂಡಲಸಂಗಮದೇವಾ?

ಸಕಲವೂ ನೀನೆ, ಸರ್ವಸ್ವವು ನಿನ್ನದೇ ಎಂಬ ವಿನಮ್ರ ಭಾವನೆ ನಮ್ಮ ಜೀವನದ ಧ್ಯೇಯವಾಗಿರಬೇಕು. ಪ್ರಸ್ತುತ ಅಂತಹ ಭಾವನೆಯನ್ನು ನಾವು ಎಲ್ಲಿಯೂ ಕಾಣುತ್ತಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ. ನನ್ನ ಆರೋಗ್ಯ, ಆರೈಕೆ ಎಲ್ಲವೂ ನಿನ್ನ ಕೈಯಲ್ಲಿದೆ. ಏಳು–ಬೀಳು ಎಲ್ಲವೂ ನಿನ್ನಿಂದಲೇ ಸಾಧ್ಯವಿದೆ. ಮಾನ–ಅಪಮಾನ ನಿನಗೆ ಸಂಬಂಧಿಸಿದ್ದು ಎಂಬ ಮಾತನ್ನು ಬಸವಣ್ಣನವರು ನಯ–ವಿನಯದಿಂದ ಈ ವಚನದ ಮೂಲಕ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅವರು ಸೃಷ್ಟಿ–ಸ್ಥಿತಿ–ಲಯಗಳಿಗೆ ಭಗವಂತನೆ ಕಾರಣ ಎನ್ನುವುದಾಗಿ ತಿಳಿಸುತ್ತಾರೆ. ಬಳ್ಳಿಗೆ ಯಾವ ರೀತಿಯಾಗಿ ಕಾಯಿ ಭಾರವಾಗುವುದಿಲ್ಲವೋ ಅದೇ ರೀತಿ ನನ್ನ ಜೀವನದ ಎಲ್ಲ ಹಂತಗಳನ್ನು ಸರಳ ರೀತಿಯಲ್ಲಿ ಸಾಗಿಸುವುದು ಅಸಾಧ್ಯವಲ್ಲ ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.