ಜೇವರ್ಗಿ: ಮಂದೇವಾಲ ಬಳಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು ಐದು ಜನರು ಮೃತಪಟ್ಟಿದ್ದಾರೆ. ಎಂಟು ಜನರಿಗೆ ತೀವ್ರ ಗಾಯಗಳಾಗಿವೆ.
ಹುಮನಾಬಾದ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 (ಈ)ಯ ಹಿಪ್ಪರಗಿ-ಮಂದೇವಾಲ ಮಧ್ಯೆ ಲಾರಿಯೊಂದು ಟೈರ್ ಒಡೆದು ನಿಂತಿತ್ತು. ಆ ಲಾರಿಗೆ ಟವೇರಾ ಜೀಪ್ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಬೀದರ್ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ರಾಮಾಪುರ ಗ್ರಾಮದವರೆಂದು ಗುರುತಿಸಲಾಗಿದೆ. ಬೆಳಿಗ್ಗೆ ರಾಮಾಪುರದಿಂದ- ಕೂಡಲಸಂಗಮಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.