ಆನೇಕಲ್: ತಾಲ್ಲೂಕಿನಲ್ಲಿ 12 ಕೋಟಿ ರೂ.ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು. ತಾಲ್ಲೂಕಿನ ಇಗ್ಗಲೂರು ಬಳಿ ಆನೇಕಲ್ ಚಂದಾಪುರ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಇನ್ನೊಂದು ವರ್ಷದಲ್ಲಿ ತಾಲ್ಲೂಕಿನ ಎಲ್ಲಾ ಪ.ಜಾ ಮತ್ತು ಪ.ವರ್ಗಗಳ ಕಾಲೋನಿಗಳಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಲಕ್ಷ್ಮೀಸಾಗರ, ಹೀಲಲಿಗೆ, ಚೊಕ್ಕಸಂದ್ರ ಗ್ರಾಮಗಳಲ್ಲಿ ತಲಾ 4 ಲಕ್ಷ ರೂ.ಗಳ ಸಿಮೆಂಟ್ ರಸ್ತೆ ಕಾಮಗಾರಿ, ಅಳಿಬೊಮ್ಮಸಂದ್ರ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ-7ರವರೆಗಿನ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ರೂ. ದೊಮ್ಮಸಂದ್ರ ಗ್ರಾಮದಲ್ಲಿ ಸಿಮೆಂಟ್ ಕಾಮಗಾರಿಗೆ 10 ಲಕ್ಷ, ವಿ.ಕಲ್ಲಹಳ್ಳಿ ಹಾಗೂ ನೆರಿಗಾ ಗ್ರಾಮದ ರಸ್ತೆ ಕಾಮಗಾರಿಗೆ 53 ಲಕ್ಷ, ಚಂಬೇನಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ 3 ಲಕ್ಷ, ಸರ್ಜಾಪುರ ಚಿಕ್ಕತಿರುಪತಿ ರಸ್ತೆ ಕಾಮಗಾರಿಗೆ 2 ಕೋಟಿ. ಹಾಗೂ ತಿಂಡ್ಲು ಗ್ರಾಮ ಮಟ್ಟನಹಳ್ಳಿ ರಸ್ತೆ ಕಾಮಗಾರಿಗೆ 52 ಲಕ್ಷ, ಮಾದಪ್ಪನಹಳ್ಳಿ ರಸ್ತೆ ಕಾಮಗಾರಿಗೆ 54 ಲಕ್ಷ, ನೆರಿಗಾ-ಹಲಸಹಳ್ಳಿ ಕಾಮಗಾರಿಗೆ 50 ಲಕ್ಷ ರೂ. ಮಂಜೂರಾಗಿದ್ದು ಸಚಿವರು ಗ್ರಾಮಗಳಲ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.