ADVERTISEMENT

ಕಪ್ಪು ಹಣ ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 18:40 IST
Last Updated 1 ಫೆಬ್ರುವರಿ 2011, 18:40 IST

ಚಿಕ್ಕಬಳ್ಳಾಪುರ: ಸ್ವಿಟ್ಜರ್‌ಲೆಂಡ್ ಸೇರಿದಂತೆ ವಿದೇಶಗಳಲ್ಲಿ ಬಚ್ಚಿಟ್ಟಿರುವ ಕಪ್ಟುಹಣವನ್ನು ಹಿಂದಕ್ಕೆ ತರಿಸುವಂತೆ ಒತ್ತಾಯಿಸಿ ರಾಮದೇವ್ ಗುರೂಜೀ ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಅಂದೋಲನ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

‘ಕಪ್ಪುಹಣವನ್ನು ದೇಶಕ್ಕೆ ತಂದರೆ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ. ಕಪ್ಪು ಹಣವನ್ನು ಶೇಖರಿಸಿಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಭಾರತ ಸ್ವಾಭಿಮಾನ ಅಂದೋಲನದ ಜಿಲ್ಲಾ ಘಟಕದ ಕಾರ್ಯದರ್ಶಿ ವಕೀಲ ಪಿ.ವಿ.ರಾಮಚಂದ್ರರೆಡ್ಡಿ ಮಾತನಾಡಿ, ‘ದೇಶದ ಯಾವ ಸರ್ಕಾರಗಳೂ ಕಪ್ಪುಹಣದ ಒಡೆಯರ ತಂಟೆಗೆ ಹೋಗುತ್ತಿಲ್ಲ. ಕಠಿಣ ಕ್ರಮ ಜರುಗಿಸುಗುತ್ತಿಲ್ಲ. ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನಹರಿಸುತ್ತಿಲ್ಲ’ ಎಂದು ಆರೋಪಿಸಿದರು. ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಮೂರ್ತಿ ಮಾತನಾಡಿದರು.

ಪತಂಜಲಿ ಯೋಗ ಸಮಿತಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕೆ.ವೀಣಾ, ಪತಂಜಲಿ ಯೋಗ ಸಮಿತಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ.ರಾಮಚಂದ್ರ. ರಂಗಮಲ್ಲಯ್ಯ, ಮುನಿಕೃಷ್ಣ, ಚಂದ್ರಶೇಖರ್, ಪ್ರಸನ್ನ, ಆರ್.ಶ್ರೀನಿವಾಸಮೂರ್ತಿ, ವಿ.ಕೆ.ನಾಗರಾಜ್, ಶ್ರೀಲಕ್ಷ್ಮಿ, ಸಾಯಿಲಕ್ಷ್ಮಿ, ಚಂದ್ರಕಲಾ, ಮಂಜುಳಾ, ನಿಖತ್‌ಸುಲ್ತಾನ, ಮಂಜುಳಾ ಬಾಲಕೃಷ್ಣ, ಪುಟ್ಟಮ್ಮ ಮತ್ತಿತರರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.