ADVERTISEMENT

ಜ್ಞಾನದ ಪ್ರತೀಕ ಸ್ವಾಮಿ ವಿವೇಕಾನಂದ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 9:35 IST
Last Updated 19 ಜನವರಿ 2012, 9:35 IST

ಹರಿಹರ: ಭಾರತೀಯ ಧರ್ಮ ಹಾಗೂ ಜ್ಞಾನದ ವೈಭವವನ್ನು ಜಗತ್ತಿಗೆ ತೋರಿಸಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದ ಎಂದು ಗದಗ-ವಿಜಾಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಬಣ್ಣಿಸಿದರು.

ನಗರದ ಡಿಆರ್‌ಎಂ ಮೈದಾನದಲ್ಲಿ ಬುಧವಾರ ನಡೆದ `ಸ್ವಾಮಿ ವಿವೇಕಾನಂದರ 150ನೇ ಜಯಂತಿ~ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.

ಯುರೋಪಿನ ಬಹುತೇಕ ಪ್ರದೇಶಗಳ ಜನರು ಮರಗಳ ಮೇಲೆ ಜೀವಿಸುತ್ತಿದ್ದ ಕಾಲದಲ್ಲಿ ಭಾರತದ ಜನಜೀವನ ನಾಗರಿಕತೆಯ ತುತ್ತ ತುದಿಯಲ್ಲಿತ್ತು. ಅಮೆರಿಕಾದ ಒಟ್ಟು ಬುದ್ಧಿವಂತರಿಗಿಂತ ಹಾಗೂ ಜ್ಞಾನಿಗಳಿಗಿಂತ ಹೆಚ್ಚಿನ ಜ್ಞಾನ ಹೊಂದಿದ ವ್ಯಕ್ತಿ ಸ್ವಾಮಿ ವಿವೇಕಾನಂದ  ಎಂದರು.

ADVERTISEMENT

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವ ಎಸ್. ಸುರೇಶಕುಮಾರ್ ಮಾತನಾಡಿ, ವಿವೇಕಾನಂದರು ನಮ್ಮ ದೇಶದಲ್ಲಿ ಜನಿಸಿದರು ಎಂದು ಹೆಮ್ಮೆ ಅಥವಾ ಗರ್ವ ಪ್ರದರ್ಶಿಸುವ ಮುನ್ನ ಅರ್ಹತೆಯನ್ನೂ ಗಳಿಸಿಕೊಳ್ಳಬೇಕಾದುದು ಅತ್ಯವಶ್ಯಕ ಎಂದರು.

ಪರಮಸುಖಾನಂದ ಜಿ, ಪ್ರಕಾಶನಂದಜಿ, ಧರ್ಮವೃತಾನಂದಜಿ, ಸುಮೇಧಾನಂದಜಿ, ಜ್ಯೋರ್ತಿಮಯಾ ನಂದಜಿ, ಶಾರದೇಶಾ ನಂದಜಿ, ಪಾದ್ರಿಗಳಾದ ವಿಕ್ಟರ್ ಲೋಬೋ, ವಿನ್ಸೆಂಟ್ ಪಿಂಟೋ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಶಾಸಕ ಬಿ.ಪಿ. ಹರೀಶ್, ನಗರಸಭೆ ಅಧ್ಯಕ್ಷೆ ರಾಧಾ ಸಿ.ಎನ್. ಹುಲಿಗೇಶ್, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಜಿ.ಪಂ. ಅಧ್ಯಕ್ಷ ಎಸ್.ಎಂ.  ವೀರೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ್, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ತಹಶೀಲ್ದಾರ್ ಜಿ. ನಜ್ಮಾ, ತಾ.ಪಂ. ಇಒ ಎಚ್.ಎನ್. ರಾಜ್, ಪೌರಾಯುಕ್ತ ಎಂ.ಕೆ. ನಲವಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್. ಬಸವರಾಜಪ್ಪ ಹಾಗೂ ಇತರರು ಉಪಸ್ಥಿತರ್ದ್ದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.