ADVERTISEMENT

ಪ್ರಳಯ ಒಂದು ಭ್ರಮೆ: ಪ್ರೊ.ರಘುನಾಥ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಶಿವಮೊಗ್ಗ: `ಪ್ರಳಯ ಕೇವಲ ಭ್ರಮೆ; ಅದು ಕಲ್ಪನೆ ಆಧಾರಿತ ಚಿಂತನೆಯಷ್ಟೇ' ಎಂದು `ಪೇಸ್' ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ವಿ. ರಘುನಾಥ್ ಅಭಿಪ್ರಾಯಪಟ್ಟರು.

ನಗರದ ಕಸ್ತೂರಬಾ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಶಾಖೆ, ರೋಟರಿ ಶಿವಮೊಗ್ಗ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ `ಶುಕ್ರ ಸಂಕ್ರಮಣ ಆಕಾಶಕಾಯಗಳಿಂದ ಭೂಮಿಗೆ ಪ್ರಳಯ' ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲ ಜ್ಯೋತಿಷಿಗಳು ಪ್ರಳಯದ ಹೆಸರಿನಲ್ಲಿ ಭೀತಿ ಮೂಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎಚ್. ಕೃಷ್ಣಮೂರ್ತಿ, ಅರವಿಂದೋ ಕಾಲೇಜಿನ ಪ್ರೊ.ರಾಮಕುಮಾರ್, ಕರ್ನಾಟಕ ವಿಜ್ಞಾನ ಪರಿಷತ್ತಿನ ಜಿಲ್ಲಾ ಶಾಖೆ ಸಂಚಾಲಕ ಡಾ.ಶೇಖರ್ ಗೌಳೇರ್, ಸುಮಿತ್ರಾ ಶ್ರೀಧರ್ ಹಾಜರಿದ್ದರು. ರೋಟರಿ ಶಿವಮೊಗ್ಗದ ಅಧ್ಯಕ್ಷ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.