ಚನ್ನಗಿರಿ (ದಾವಣಗೆರೆ ಜಿಲ್ಲೆ):ತಾಲ್ಲೂಕು ತಾವರೆಕೆರೆ ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಮನು(15), ಮಹೇಶ್(10), ಗೌತಮ್(10) ಮೃತಪಟ್ಟ ಬಾಲಕರು. ಮಧ್ಯಾಹ್ನ ಕೆರೆಗೆ ಈಜಲು ಹೋಗಿದ್ದರು. ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ಬಾಲಕರನ್ನು ಹುಡುಕಲು ಪ್ರಾರಂಭಿಸಿದರು. ಆಗ ಕೆರೆ ಏರಿಯ ಮೇಲೆ ಈ ಬಾಲಕರ ಬಟ್ಟೆಗಳು ಇರುವುದು ಕಂಡುಬಂದಿತು.
ನಂತರ ನುರಿತ ಈಜುಗಾರರನ್ನು ಕರೆತಂದು ಬಾಲಕರ ಶವಗಳ ಹುಡುಕಾಟ ನಡೆಸಲಾಯಿತು. ರಾತ್ರಿ 9ರ ಹೊತ್ತಿಗೆ ಮೂರೂ ಶವಗಳು ಪತ್ತೆಯಾದವು.
ಸ್ಥಳಕ್ಕೆ ಸಿಪಿಐ ರಮೇಶ್‌ಕುಮಾರ್ ಭೇಟಿ ನೀಡಿದ್ದರು. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.