ADVERTISEMENT

ಲಾಕಪ್ ಸಾವು: ಮೂವರು ಅಧಿಕಾರಿಗಳು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2012, 19:30 IST
Last Updated 8 ನವೆಂಬರ್ 2012, 19:30 IST

ಚಿಂತಾಮಣಿ: ಲಾರಿ ಕಳವಿನ ಆರೋಪದ ಮೇಲೆ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಮಂಜುನಾಥ ಮಂಗಳವಾರ ರಾತ್ರಿ ಪೊಲೀಸರ ವಶದಲ್ಲಿದ್ದಾಗಲೇ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ಸೌಮ್ಯಲತಾ ಗುರುವಾರ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮಂಜುನಾಥನನ್ನು  ಶುಕ್ರವಾರವೇ ವಶಕ್ಕೆ ಪಡೆದಿದ್ದರೂ ಕೋರ್ಟ್‌ಗೆ ಹಾಜರುಪಡಿಸದೆ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ ಶಿಡ್ಲಘಟ್ಟ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎನ್. ರಮೇಶ್, ಚಿಂತಾಮಣಿ ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಮಂಜುನಾಥ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಕೃಷ್ಣಮೂರ್ತಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಈ ಮೂವರೂ ತಲೆಮರೆಸಿಕೊಂಡಿದ್ದಾರೆ.
ಲಾಕಪ್ ಸಾವಿನಿಂದಾಗಿ ಪೊಲೀಸ್ ಠಾಣೆ ಸುತ್ತಮುತ್ತ ಬುಧವಾರ ಏರ್ಪಟ್ಟಿದ್ದ ಉದ್ವಿಗ್ನತೆ ಗುರುವಾರ ಶಮನಗೊಂಡಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್ ನೀಡಿದ ಭರವಸೆ ಮೇಲೆ  ಮಂಜುನಾಥ್‌ನ ಸಂಬಂಧಿಕರು ಮತ್ತು ಗ್ರಾಮದವರು ನಡೆಸುತ್ತಿದ್ದ ಧರಣಿ ಹಿಂತೆಗೆದುಕೊಂಡರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.