ADVERTISEMENT

ಸಮಸ್ಯೆ ಪರಿಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಕೋಲಾರ: ರೈತರ ಸಮಸ್ಯೆ ಪರಿಹರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಬಿಜೆಪಿ ರೈತ ಮೋರ್ಚಾ ಪ್ರಮುಖರು, ಕಾರ್ಯಕರ್ತರು ಧರಣಿ ನಡೆಸಿದರು.
ಚೀನಾದಿಂದ ಆಮದಾಗುತ್ತಿರುವ ರೇಷ್ಮೆ ಮೇಲೆ ಶೇ. 50ರಷ್ಟು ಸುಂಕ ವಿಧಿಸಬೇಕು.
 
ಬತ್ತಕ್ಕೆ ನೀಡಿರುವ ಬೆಂಬಲ ಬೆಲೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ರೈತರ ಕೃಷಿ ಪರಿಕರಗಳಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ಪೂರೈಸಬೇಕು. ಎಂಡೋಸಲ್ಫಾನ್ ಕೂಡಲೇ ನಿಷೇಧಿಸಬೇಕು. ಕೃಷಿ ಕಾರ್ಮಿಕರಿಗೆ ಮಾಸಾಶನ ಘೋಷಿಸಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ಗೊಬ್ಬರ, ಯಂತ್ರೋಪಕರಣ ನೀಡಬೇಕು ಎಂದು ಆಗ್ರಹಿಸಿದರು.

ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧಕ್ಷ ಎಸ್.ಎನ್.ಶ್ರೀರಾಂ ಒತ್ತಾಯಿಸಿದರು. ಜಗದೀಶ್ವರಾಚಾರಿ, ಓಂಶಕ್ತಿ ಚಲಪತಿ, ಹೂಹಳ್ಳಿ ವೆಂಕಟಾಚಲಪತಿ, ಸಿ.ವೆಂಕಟೇಶ್, ಜಯಶಂಕರ್, ಕೆಂಪಣ್ಣ, ಓಹಿಲೇಶ್ವರ, ರತ್ನಮ್ಮ, ಶಶಿಕಲಾ, ಉಮಾ, ಮಮತಾ, ಪಾಪೇಗೌಡ, ಆನಂದಪ್ಪ, ಪಾರ್ಥಸಾರಥಿ, ನಾಗರಾಜ್, ಅಶ್ವಥಗೌಡ, ಸುಬ್ಬರಾಮಪ್ಪ, ಜಮೀಲ್ ಉಲ್ಲಾ ಖಾನ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.