ADVERTISEMENT

ಸಿಮೆಂಟ್ ರಸ್ತೆ ನಿರ್ಮಾಣ: ಬೋಪಯ್ಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಗೋಣಿಕೊಪ್ಪಲು: ಹೊಂಡ ಬಿದ್ದು ಹಾಳಾಗಿದ್ದ ಗೋಣಿಕೊಪ್ಪಲು ಪಟ್ಟಣದ ರಸ್ತೆಗಳಿಗೆ ಡಾಂಬರು ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪಟ್ಟಣದ ಯಾವ ರಸ್ತೆ ನೋಡಿದರೂ ಕಪ್ಪು ಬಣ್ಣದಿಂದ ಕೂಡಿದೆ.

ಪಟ್ಟಣದ ರಸ್ತೆ ಕಾಮಗಾರಿಗಾಗಿ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ರೂ 3 ಕೊಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಪಟ್ಟಣದ ಎಲ್ಲ ರಸ್ತೆಗಳಿಗೂ ಭರದಿಂದ ಡಾಂಬರು ಹಾಕಲಾಗುತ್ತಿದೆ. ಮಂಗಳವಾರ ಬಸ್ ನಿಲ್ದಾಣದ ರಸ್ತೆ ಡಾಂಬರೀಕರಣಗೊಳಿಸಲಾಯಿತು. ಇದರಿಂದ ನಿಲ್ದಾಣದ ಬಸ್‌ಗಳು ಸಂಜೆವರೆಗೂ ಬೇರೆ ಕಡೆ ನಿಲ್ಲಬೇಕಾಯಿತು. ಪ್ರಯಾಣಿಕರಿಗೆ ಸ್ವಲ್ಪ ತೊಂದರೆಯಾದರೂ ರಸ್ತೆ ಹೊಂಡ ಮುಚ್ಚಿದ ಸಂತಸ ಬೇಸರ ಮರೆಸಿತು.

ರಸ್ತೆ ಕಾಮಗಾರಿ ವೀಕ್ಷಿಸಿದ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ, ಪಟ್ಟಣದ ರಸ್ತೆಗಳಿಗೆ ಸಿಮೆಂಟ್ ರಸ್ತೆ ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ. ಸ್ಥಳೀಯ ಎಪಿಎಂಸಿಯಿಂದ ಕಾವೇರಿ ಕಾಲೇಜಿನವರೆಗೆ  ರೂ 2 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.