ADVERTISEMENT

ಹೀಗೊಂದು ಆದರ್ಶ ಮದುವೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಗುಲ್ಬರ್ಗ: ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಬುಧವಾರ ಮದುವೆ ಸಡಗರ. ನಿಲಯದ ಇಬ್ಬರು ಯುವತಿಯರಾದ ಕವಿತಾ ಹಾಗೂ ಗೀತಾ ಅವರ ವಿವಾಹ ಶಾಸ್ತ್ರೋಕ್ತ ವಿಧಾನದಲ್ಲಿ ನಡೆಯಿತು.

ಮಧ್ಯಾಹ್ನ 12.05ಕ್ಕೆ ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ನಡೆದ ಈ ಇಬ್ಬರ ವಿವಾಹಕ್ಕೆ ನಿಲಯದ ಸಿಬ್ಬಂದಿ, ನಿವಾಸಿಗಳು, ಅಧಿಕಾರಿಗಳು ಹಾಗೂ ಪತ್ರಕರ್ತರು ಸಾಕ್ಷಿಗಳಾದರು. 2006ರಲ್ಲಿ ಮಹಿಳಾ ನಿಲಯಕ್ಕೆ ಕವಿತಾ ಸೇರ್ಪಡೆಯಾಗಿದ್ದರೆ, ಗೀತಾ ಒಂದು ವರ್ಷದ ಹಿಂದೆ ನಿಲಯಕ್ಕೆ ಸೇರ್ಪಡೆಯಾಗಿದ್ದಳು.

ವಿಜಾಪುರದ ಉಮಾ ಹಾಗೂ ಶ್ರೀಕಾಂತ ಜೋಶಿ ಅವರ ಪುತ್ರ ಶ್ರೀಧರ ಗೀತಾಳನ್ನು ಕೈಹಿಡಿದರೆ, ಸುರಪುರ ತಾಲ್ಲೂಕಿನ ನಾರಾಯಣಪುರದ ವಿಜಯಲಕ್ಷ್ಮೀ ಹಾಗೂ ಕೃಷ್ಣರಾವ ಕುಲಕರ್ಣಿ ಅವರ ಪುತ್ರ ಸುಭಾಷರಾವ ಕವಿತಾಳನ್ನು ವಿವಾಹವಾದರು.

ಸುಭಾಷರಾವ ಸ್ವಂತ ಹೋಟೆಲ್‌ನ ಮಾಲೀಕರಾಗಿದ್ದಾರೆ. ಶ್ರೀಧರ ಅವರು ಜ್ಯೋತಿಷ್ಯ ಹಾಗೂ ವೈದಿಕ ವೃತ್ತಿ ನಡೆಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರತ್ನಾ ಕಲಮದಾನಿ, ನಿಲಯದ ಪ್ರಭಾರಿ ಅಧೀಕ್ಷಕಿ ರಾಧಾಬಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.