ADVERTISEMENT

ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 8:58 IST
Last Updated 9 ಏಪ್ರಿಲ್ 2013, 8:58 IST

ಮುಧೋಳ: ಮತದಾರರ ಪಟ್ಟಿಯಲ್ಲಿ ಅಕ್ರಮ ಹೆಸರು ಸೇರ್ಪಡೆಯಾಗುತ್ತಿದೆ ಎಂದು ಆರೋಪಿಸಿ ನಡೆಸಿದ ಪ್ರತಿಭಟನೆ ಜಮಖಂಡಿ ಕಂದಾಯ ಉಪವಿಭಾಗಾ ಧಿಕಾರಿ ಹಾಗೂ ಡಿಎಸ್‌ಪಿ ಅವರ ಭರ ವಸೆ ಮೇರೆಗೆ ಕಾಂಗ್ರೆಸ್‌ಕಾರ್ಯ ಕರ್ತರು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದರು.

ಆದರೆ ಸಂಜೆ 5 ಸುಮಾರಿಗೆ ಸುಮಾರು 60ಕ್ಕಿಂತ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ನುಗ್ಗಿ ಕಂಪ್ಯೂಟರ್ ಹಾರ್ಡ್ ಡಿಸ್ಕ ನೀಡುವಂತೆ ಒತ್ತಾಯಿಸಿ ಕೆಲಸಕ್ಕೆ ಅಡಚಣೆಮಾಡಿದ್ದಲ್ಲದೆ ದೈಹಿಕ ಹಲ್ಲೆಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಪೊಲೀಸರು ಆಗಮಿಸಿ ಹೊರಗೆ ಕಳುಹಿಸಿದ್ದಾರೆ.

ಈ ಕುರಿತು ತಹಶೀಲ್ದಾರ ಕಚೇ ರಿಯ ಶಿರಸ್ತೇದಾರ ಕಡಕೋಳ ಅವರು 60 ಜನರ ಮೇಲೆ  ದೂರು ನೀಡಿದ್ದಾರೆ. ಸಿಪಿಐ ಎಚ್.ಡಿ.ಮುದರಡ್ಡಿ ದೂರು ನೀಡಿರುವುದನ್ನು ಖಚಿತಪಡಿಸಿ ಹಲ್ಲೆಗೈದವರ ಮೇಲೆ ಕಾನೂನು ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ.

`ಕಾಂಗ್ರೆಸ್ ಗೆಲವು ಖಚಿತ'
ಮುಧೋಳ:
ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಗಾಳಿ ಬೀಸಿದ್ದು ಜನರು ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಕಾರ್ಯ ಗಳು ಹಾಗೂ ಎರಡು ಅವಧಿಗೆ ಈ ಕ್ಷೇತ್ರಕ್ಕೆ ಸಲ್ಲಿಸಿದ ಮಾದರಿ ಸೇವೆ ಯನ್ನು ಮನ್ನಿಸಿ ಮತದಾರರು ಕಾಂಗ್ರೆಸ್ ಅನ್ನು ಆಯ್ಕೆಮಾಡುತ್ತಾರೆ ಎಂದು ಆರ್.ಬಿ.ತಿಮ್ಮಾಪುರ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ರಮವಾಗಿ ಮತಾದರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗುತ್ತಿದ್ದು, ಇದನ್ನು ತಕ್ಷಣ ಕೈಬಿಟ್ಟು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು. ಈ ಕೃತ್ಯದಲ್ಲಿ ಸಚಿವರ ಸಂಬಂಧಿ ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆಂದು  ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎ. ಕಡಪಟ್ಟಿ, ಸೈಯದಸಾಬ್ ಹುಬ್ಬಳಿಕರ, ದುಂಡಪ್ಪ ಬರಮನಿ, ಯಶವಂತ ಚವ್ಹಾಣ, ಕೃಷ್ಣಪ್ಪ ಕನಕರಡ್ಡಿ, ಡಿ.ಬಿ. ಜೈನಾಪುರ, ಕೆ.ಆರ್.ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.