ADVERTISEMENT

ಗುಳೇದಗುಡ್ಡ ಪುರಸಭೆ: ಮಹಿಳೆಯರ ಕೈಗೆ ಆಡಳಿತ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 8:59 IST
Last Updated 16 ಸೆಪ್ಟೆಂಬರ್ 2013, 8:59 IST

ಗುಳೇದಗುಡ್ಡ: ತೀವ್ರ ಕುತೂಹಲ ಮೂಡಿಸಿದ್ದ ಗುಳೇದಗುಡ್ಡ ಪುರಸಭೆಯ ಅಧ್ಯಕ್ಷ ಹಾಗೂ ಉಪಾ­ಧ್ಯಕ್ಷರ ಆಯೆ್ಕ ಪ್ರಕಿ್ರಯೆ ಗುರುವಾರ ನಡೆದ ಪುರ­ಸಭೆಯ ಸಭಾ ಭವನದಲಿ್ಲ ಸುಸೂತ್ರವಾಗಿ ನಡೆದು ಪುರಸಭೆಯ ಆಡಳಿತದ ಅಧಿಕಾರ ಮತ್ತೆ ಮಹಿಳೆಯರ ಕೈಗೆ ಹಂಚಿ ಹೋಯಿತು.

ಪುರಸಭೆ ಅಧ್ಯಕ್ಷ ಸಾ್ಥನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸಾ್ಥನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಈ ಪ್ರಕಾರ ಸಾಮಾನ್ಯ ಮಹಿಳೆ ಬಿಜೆಪಿ ಅಭ್ಯರ್ಥಿ ಮಹಾನಂದಾ ಗುಡ್ಡದ ಅಧ್ಯಕ್ಷರಾಗಿ ಹಾಗೂ ಪರಿಶಿಷ್ಟ ಜಾತಿಯ ಕಾಂಗೆ್ರಸಿನ ಕಮಲವ್ವ ದಂಡಿನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯೆ್ಕಯಾಗುವ ಮೂಲಕ ಬಹಳ ಕುತೂಹಲ ಕೆರಳಿಸಿದ್ದ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯಲಿ್ಲ ಎರಡು ಸಾ್ಥನಗಳು ಮಹಿಳೆಯರ ಪಾಲಾದವು.

ಒಟ್ಟು 23 ಸದಸ್ಯ ಬಲ ಹೊಂದಿರುವ ಪುರಸಭೆಯಲಿ್ಲ 13 ಜನ ಬಿಜೆಪಿ ಸದಸ್ಯರ ಬಹುಮತದೊಂದಿಗೆ ಗೆಲುವಿನ ನಗೆ ಹರಡಿತ್ತು. ನಂತರ ಸರಕಾರ ಅಧ್ಯಕ್ಷ– ಉಪಾಧ್ಯಕ್ಷ ಸಾ್ಥನಗಳ ಮೀಸಲಾತಿ ಪಟ್ಟಿ ಪ್ರಕಟಿಸಿದ ಬಳಿಕ ಅಧ್ಯಕ್ಷ ಸಾ್ಥನಕೆ್ಕ ಸಾಮಾನ್ಯ ಮಹಿಳೆಯಾಗಿತ್ತು. ಅದು ಬಿಜೆಪಿ ಪಾಲಾಗಿತ್ತು. ಇನು್ನ ಉಪಾಧ್ಯಕ್ಷ ಸಾ್ಥನ ಪ. ಜಾತಿಗೆ ಮೀಸಲಿದ್ದ ಕಾರಣ ಈ ಜಾತಿಗೆ ಸೇರಿದ ಸದಸ್ಯರು ಬಿಜೆಪಿ ಪಕ್ಷದಲಿ್ಲ ಇರಲಿಲ್ಲ. ಹೀಗಾಗಿ ಉಪಾಧ್ಯಕ್ಷ ಸಾ್ಥನ ಕಾಂಗೆ್ರಸ್‌ ಪಕ್ಷದ ಪಾಲಿಗೆ ಹೋಗಿದ್ದರಿಂದ ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನು್ನವಂತಾಯಿತು.

ಚುನಾವಣೆಯಲಿ್ಲ ಅಧ್ಯಕ್ಷ ಸಾ್ಥನಕೆ್ಕ ಬಿಜೆಪಿ ಪಕ್ಷದ ಸದಸ್ಯರು ಅಕ್ಕಮಹಾದೇವಿ ಹೆಗಡಿ, ಮಹಾನಂದ ಗುಡ್ಡದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲಿ್ಲಸಿದ್ದರು ಹಾಗೂ ಉಪಾಧ್ಯಕ್ಷ ಸಾ್ಥನಕೆ್ಕ ಕಾಂಗೆ್ರಸ್‌ನ ಕಮಲವ್ವ ದಂಡಿನ ಒಬ್ಬರೇ ನಾಮ ಪತ್ರ ಸಲಿ್ಲಸಿದ್ದರು. ಅಧ್ಯಕ್ಷ ಸಾ್ಥನಕೆ್ಕ ಸಲಿ್ಲಸಿದ್ದ ಅಕ್ಕಮಹಾದೇವಿ ಹೆಗಡಿ ಅವರು ತಮ್ಮ ನಾಮಪತ್ರವನು್ನ ಹಿಂದಕೆ್ಕ ಪಡೆದ ಪರಿಣಾಮ ಅಧ್ಯಕ್ಷ– ಉಪಾಧ್ಯಕ್ಷರ ಆಯೆ್ಕ ಅವಿರೋಧ­ವಾಗಿ ನಡೆಯಿತು ಎಂದು ಚುನಾವಣಾಧಿ­ಕಾರಿ ಹಾಗೂ ತಹಶೀಲಾ್ದರ್‌ ಅಜೀಜ್‌ ದೇಸಾಯಿ ಘೋಷಿಸಿದರು. ಪುರಸಭೆ ಮುಖಾ್ಯಧಿ­ಕಾರಿ ಬಿ.ಟಿ. ಬಂಡಿವಡ್ಡರ, ಕಂದಾಯ ನಿರೀಕ್ಷಕ ಈಶ್ವರ ಗಡ್ಡಿ ಇತರರು ಇದ್ದರು.

ವಿಜಯೋತ್ಸವ: ಪುರಸಭೆ ಅಧ್ಯಕ್ಷ– ಉಪಾಧ್ಯಕ್ಷರ ಫಲಿತಾಂಶ ಪ್ರಕಟವಾಗು­ತ್ತಿದ್ದಂತೆ ಹೊರಗಡೆ ಸೇರಿದ್ದ ಪಕ್ಷದ ಅಭಿಮಾನಿಗಳು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಅಧ್ಯಕ್ಷರಾಗಿ ಆಯೆ್ಕಯಾದ ಮಹಾ­ನಂದಾ ಗುಡ್ಡದ ಅವರನು್ನ ನಗರದ ಪ್ರಮುಖ ಬೀದಿಗಳಲಿ್ಲ ಪಾದಯಾತೆ್ರ ಮೂಲಕ ಮೆರವಣಿಗೆ ಮಾಡಿ ವಿಜಯೋತ್ಸವ ಆಚರಿಸಿದರು.

ವಿಜಯೋತ್ಸವದಲಿ್ಲ ಮಾಜಿ ಶಾಸಕ ಜಿಲಾ್ಲ ಅಧ್ಯಕ್ಷ ರಾಜಶೇಖರ ಶೀಲವಂತ. ತಾಲೂ್ಲಕು ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಅಧ್ಯಕ್ಷ ಮುತ್ತಣ್ಣ ಕಳಿ್ಳಗುಡ್ಡ, ರವಿ ಪಟ್ಟಣಶೆಟ್ಟಿ, ಕಮಲು ಮಾಲಪಾಣಿ, ಬಸವರಾಜ ಕರನಂದಿ, ಗಣೇಶ ಕವಿಶೆಟ್ಟಿ. ಮುರಗೇಶ ರಾಜನಾಳ, ಅಶೋಕ ಹೆಗಡಿ, ಮಲ್ಲಪ್ಪ ಕವಿಶೆಟ್ಟಿ, ರಾಚಪ್ಪ ಗೊಗ್ಗಲ. ಸಂಪತ್‌­ಕುಮಾರ ರಾಠಿ, ಗಣೇಶ ಶೀಲವಂತ, ವಿನೋದ ಮದಾ್ದನಿ ಹಾಗೂ 23 ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.