ADVERTISEMENT

ದೇವಾಲಯದ ಬದಲು ವಿದ್ಯಾಲಯ ನಿರ್ಮಿಸಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 7:05 IST
Last Updated 21 ಜೂನ್ 2011, 7:05 IST

ಬಾಗಲಕೋಟೆ: ನಾಡಿನಲ್ಲಿ ದೇವಾಲಯ ನಿರ್ಮಿಸುವ ಬದಲು ವಿದ್ಯಾಲಯವನ್ನು ಹೆಚ್ಚು ತೆರೆಯಬೇಕು ಎಂದು ವಕೀಲ ಪಿ.ಎಸ್. ಭೈರಾಮಟ್ಟಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ, ವಕೀಲ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ ಮತ್ತಿತರ ಇಲಾಖೆ ಮತ್ತು ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಗರದ ವಿದ್ಯಾ ಪ್ರಸಾರಕ ಮಂಡಳ(ಸಕ್ರೀ ಹೈಸ್ಕೂಲ್) ಸಭಾಭವನದಲ್ಲಿ ಸೋಮವಾರ ನಡೆದ ಜನತಾ ನ್ಯಾಯಾಲಯದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ `ಮಕ್ಕಳ ಶೈಕ್ಷಣಿಕ ಹಕ್ಕುಗಳು~ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಪ್ರಸ್ತುತ ದೇಶದಲ್ಲಿ 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಯಲ್ಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ಮಾಡಿದರು.

`ಜನನ ಮತ್ತು ಮರಣ ನೋಂದಣಿ~ ಕಾಯ್ದೆ ಕುರಿತು ಉಪನ್ಯಾಸ ನೀಡಿದ ವಕೀಲ ಎಸ್.ಎ. ಜೋರಾಪೂರ, ಜನನ ಮತ್ತು ಮರಣ ಎಂಬುದು ಕುಟುಂಬ ಮೇಲೆ ಎಷ್ಟು ಪರಿಣಾಮ ಬೀರುತ್ತದೆಯೋ ಅಷ್ಟೇ ಪರಿಣಾಮ ದೇಶದ ಮೇಲೂ ಬೀರುತ್ತದೆ ಎಂದರು.

ದೇಶದ ವಿವಿಧ ಯೋಜನೆ ಮತ್ತು ಕಾರ್ಯಕ್ರಮ ರೂಪಿಸುವಲ್ಲಿ ಜನನ ಮತ್ತು ಮರಣ ದಾಖಲಾತಿ ಅತ್ಯಗತ್ಯ ಎಂದ ಅವರು ವ್ಯಕ್ತಿಯ ಜನನ ಮತ್ತು ಮರಣವಾದ 21 ದಿನದೊಳಗೆ ನೋಂದಾಯಿಸುವಂತೆ ಸಲಹೆ ಮಾಡಿದರು. ಜನನ ಪ್ರಮಾಣ ಪತ್ರವು ಶಾಲೆ ಸೇರ್ಪಡೆಗೆ, ಗುರುತು ಚೀಟಿ ಹೊಂದಲು, ಪಾಸ್‌ಪೋರ್ಟ್ ಹೊಂದಲು, ವಿವಾಹ ನೋಂದಾಯಿಸಲು ಸೇರಿದಂತೆ ಇನ್ನಿತರೆ ಅಗತ್ಯ ದಾಖಲಾತಿಗೆ ಅನುಕೂಲವಾಗುತ್ತದೆ ಎಂದರು. ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶಿವಶಂಕರ ಬಿ. ಅಮರಣ್ಣವರ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಬಸವರಾಜ ಎಸ್. ಚೇಗರಡ್ಡಿ, ವಿದ್ಯಾ ಪ್ರಸಾರಕ ಮಂಡಳಿ ಅಧ್ಯಕ್ಷ ಕೆ.ಎಸ್. ದೇಶಪಾಂಡೆ, ವಕೀಲರ ಸಂಘದ ಜಿಲ್ಲಾಧ್ಯಕ್ಷ ವಿ.ಪಿ. ಗುಡಿ,  ಕಾರ್ಯದರ್ಶಿ ಎಂ.ಎಂ. ಹಂಡಿ, ವಿದ್ಯಾ ಪ್ರಸಾರಕ ಮಂಡಳಿ ಕಾರ್ಯದರ್ಶಿ ಎಸ್. ಬಿ. ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.