ಕೆರೂರ: ಕುಳಗೇರಿ ಕ್ರಾಸ್‌ನ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ಸಣ್ಣ ಮತ್ತು ಇತರೆ ರೈತರಿಗೆ ಸಜ್ಜಿ, ಹೈ ಜೋಳ, ಹೆಸರು, ತೊಗರಿ, ಗೋವಿನ ಜೋಳ, ಹಾಗೂ ಸೂರ್ಯಕಾಂತಿ ಬೀಜ ಗಳನ್ನು 5 ಎಕರೆವರೆಗೆ ಸೌಲಭ್ಯದ ಜೊತೆಗೆ ರಿಯಾಯಿತಿ ದರದಲ್ಲಿ ಜಿಪ್ಸಂ, ಜಿಂಕ್ ಸಲ್ಪೇಟ್, ಬೊರ‌್ಯಾಕ್ಸ ಟ್ಯೆಕೊ ಡರ್ಮಾ ಲಭ್ಯವಿದ್ದು ಕುಳಗೇರಿ ಹೋಬಳಿಯ ರೈತರು ಉಪಯೋಗ ಪಡೆಯುವಂತೆ ಸಹಾಯಕ ಕೃಷಿ ಅಧಿಕಾರಿ ಎಂ.ಎ. ಫಾರೂಕಿ ಕೋರಿದ್ದಾರೆ.
ಪ್ರಸಕ್ತ ವರ್ಷ ಅವಧಿಗೆ ಮುನ್ನ ಸುರಿದ ಮುಂಗಾರು ಮಳೆರಾಯ, ನಂತರ ಮುನಿಸಿಕೊಂಡಿದ್ದಾನೆ. ಈ ಸಲ ಸ್ವಲ್ಪ ತಡವಾದರೂ ಸಹ ರೈತರ ಮುಖದಲ್ಲಿ ಮಂದಹಾಸ ಮೂಡಿಸುವುದು ಗ್ಯಾರಂಟಿ ಎಂಬ ವಿಶ್ವಾಸ ಕೃಷಿಕರಲ್ಲಿದೆ. ಅದಕ್ಕಾಗಿ ರೈತ ಸಂಪರ್ಕ ಕೇಂದ್ರದಲ್ಲಿ ನೂರಾರು ರೈತರು ಸಾಲುಗಟ್ಟಿ ಬೀಜಗಳನ್ನ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ರಾಜ್ಯದೆಲ್ಲೆಡೆ ಪ್ರಸಕ್ತ ಅವಧಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಿಂದಿನಂತೆ ಈ ಸಲ ಕೈ ಬಿಡುವುದಿಲ್ಲ ಎಂಬ ಆಶಯ ಇಲ್ಲಿನ ರೈತರ ಮೊಗದಲ್ಲಿ ಇಣುಕುತ್ತಿದೆ.
ಇನ್ನು ಕೆರೂರ ಭಾಗದ ರೈತರು ಎರಡು ವರ್ಷ ಸತತ ಬರಗಾಲದಿಂದ ತತ್ತರಿಸಿದ್ದು ಈ ಸಲವಾದರೂ ಮಳೆರಾಯ ಮುನಿಸಿಕೊಳ್ಳದೇ, ನೆಮ್ಮದಿಯ ಜೀವನ ಸಾಗಿಸುವುದಕ್ಕೆ ಕರುಣೆ ತೋರಿ, ನೇಗಿಲಯೋಗಿಗಳಿಗೆ ಖುಷಿ ಕೊಡಲಿ ಎಂದು ವರುಣನಲ್ಲಿ ಪ್ರಾರ್ಥಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.