ADVERTISEMENT

ರೈತರಿಗೆ ಬೆಳೆ ವಿಮಾ ಕಂತು: ಅವಧಿ ಹೆಚ್ಚಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 9:10 IST
Last Updated 2 ಜನವರಿ 2012, 9:10 IST

ಗುಳೇದಗುಡ್ಡ: ರಾಷ್ಟ್ರೀಯ ಹಿಂಗಾರಿ ಕೃಷಿ ಬೆಳೆ ವಿಮಾ ಕಂತು ಭರಣಾ ಮಾಡುವ ಅವಧಿಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿ ರೈತರು ಹಾಗೂ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಬಿ.ಎಸ್.ಎನ್.ಎಲ್. ತಾಂತ್ರಿಕ ತೊಂದರೆಯಿಂದಾಗಿ ಎರಡು ದಿನ ಕಂದಾಯ ಇಲಾಖೆಯ ಹಾಗೂ ಬ್ಯಾಂಕಿನ ವ್ಯವಹಾರ ಸ್ಥಗಿತಗೊಂಡಿರುವ ಕಾರಣ ರೈತರು ಉತಾರ ಪಡೆಯಲು ಮತ್ತು ಬ್ಯಾಂಕಿಗೆ ಹಣ ಸಂದಾಯ ಮಾಡಲು ರೈತರಿಗೆ ತೊಂದರೆಯಾದ ಕಾರಣ ಬೆಳೆ ವಿಮಾ ಕಂತು ಕಟ್ಟಲು ಒಂದು ತಿಂಗಳ ವಿಸ್ತರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ರೈತರು ಪ್ರತಿಭಟನೆ ಮೂಲಕ ತಾಲೂಕ ತಹಸೀಲ್ದಾರರಿಗೆ ಮನವಿ ಪತ್ರವನ್ನು ವಿಶೇಷ ತಹಸೀಲ್ದಾರ ಕಚೇರಿಗೆ ತೆರಳಿ ಸಲ್ಲಿಸುವುದರ ಮೂಲಕ ಒತ್ತಾಯಿಸಿದ್ದಾರೆ.

ಕಂದಾಯ ನಿರೀಕ್ಷಕ ಬಸವರಾಜ ಮೇಟಿ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಹನಮಪ್ಪ ಕುಡ್ಡಣ್ಣವರ, ಲಕ್ಷ್ಮಣ್ಣ ಶಾಸಣ್ಣವರ, ಪಕಿರಪ್ಪ ಮಾದರ, ದುರ್ಗಪ್ಪ ಮಲ್ಲಾರ, ಮಂಜಪ್ಪ ಕೊಡಿ, ದ್ಯಾಮಣ್ಣವರ ಗದ್ದನಕೇರಿ, ಮಹಾಂತೇಶ ಹೊಸೂರ, ಮಹೇಶ ಸತ್ತಿಗೇರಿ, ಶೇಖಣ್ಣ ಕಳ್ಳಿಗುಡ್ಡ, ಶಿವಾನಂದ ಸಿಂಗಣ್ಣವರ, ಶ್ರೀಕಾಂತ ಹುನಗುಂದ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.