ADVERTISEMENT

ವಿದ್ಯೆಗೆ ವಿನಯವೇ ಭೂಷಣ: ಕೃಷ್ಣಶಾಸ್ತ್ರಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 6:30 IST
Last Updated 23 ಮಾರ್ಚ್ 2011, 6:30 IST

ಬೆನಕಟ್ಟಿ(ಬಾಗಲಕೋಟೆ): ವಿದ್ಯೆಗೆ ವಿನಯವೇ ಭೂಷಣವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನ ದುದ್ದಕ್ಕೂ ವಿನಯಶೀಲತೆ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಪ್ರವಚನಕಾರ ಕೃಷ್ಣಶಾಸ್ತ್ರಿ ಹೇಳಿದರು. ಇಲ್ಲಿನ ಹೇಮರಡ್ಡಿ ಮಲ್ಲಮಾಂಬೆ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಜೀವನ ಮಹತ್ವದ ಘಟ್ಟವಾಗಿದ್ದು ಈ ಅವಧಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣ ಸಂಯೋಜಕ ಆರ್.ಟಿ.ಬಾಳಕ್ಕನವರ, ಸತತ ಅಧ್ಯಯನದ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು. ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಅಧ್ಯಯನದಲ್ಲಿ ಹೆಚ್ಚು ಶ್ರಮದ ಅಗತ್ಯವಿದೆ ಎಂದು ಕೃಷಿ ಅಧಿಕಾರಿ ರಾಮಣ್ಣ ಚಿಕ್ಕೂರ ಹೇಳಿದರು.

ಶಿಕ್ಷಣ ಸಂಯೋಜಕ ಆರ್.ಟಿ. ಬಾಳಕ್ಕನವರ ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಪಡೆದವರು ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿ ಚಟುವಟಿಕೆಗಳಲ್ಲಿ ಉತ್ತಮ ಪ್ರದ ರ್ಶನ ತೋರಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಯಿತು. 

ಶಾಲೆಯ ಮುಖ್ಯಾಧ್ಯಾಪಕ ಪಿ.ಬಿ.ಗಂಗರಡ್ಡಿ, ವಿಶ್ವಭಾರತಿ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಡಾ.ಎಸ್.ಎನ್.ಅಮಾತೆಪ್ಪನವರ, ಲಚ್ಚಪ್ಪ ಬಾಳಕ್ಕನವರ, ಕೃಷ್ಣಾ ಯಡಹಳ್ಳಿ, ಸಿ.ಎನ್.ಬಾಳಕ್ಕನವರ, ವಿ.ಕೆ. ಬೂದಿಹಾಳ, ವಿಠ್ಠಲ ಹುಡೇದಮನಿ, ಚಂದ್ರಶೇಖರ ಪೆಟ್ಲೂರ, ಶಿಕ್ಷಕರಾದ ಎಸ್.ಎಸ್.ಜಮಾದಾರ, ಜಿ.ಜಿ.ಚಿತ್ತರಗಿ, ಎಚ್.ಬಿ.ಗೋಣಿ, ನಿಂಬಲಗುಂದಿ ಮತ್ತಿತರರು ಉಪಸ್ಥಿತರಿದ್ದರು. ಎನ್.ಬಿ.ಮದಕಟ್ಟಿ ಸ್ವಾಗತಿಸಿದರು. ಪಿ.ಸಿ.ಮಾದರ ನಿರೂಪಿಸಿದರು. ಆರ್.ಎಚ್.ಕುಲಕರ್ಣಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.