ಮುಧೋಳ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
“ಭಾರತ ನಿರ್ಮಾಣ” ಯಾತ್ರೆಯ ನಿಮಿತ್ತ ಮುಧೋಳ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ತಾಲ್ಲೂಕಿನ ಜಾಲಿಬೇರ, ಉತ್ತೂರ, ಒಂಟಗೋಡಿ ಗ್ರಾಮಗಳಿಗೆ ಪಾದಯಾ ತ್ರೆಯ ಮೂಲಕ ತೆರಳಿ ಅಲ್ಲಿ ಆಯೋಜಿ ಸಿದ್ದ ಕಾರ್ಯಕ್ರಮದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಭ್ರಷ್ಟರಿಂದ ಕೂಡಿದ ಬಿಜೆಪಿಯಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ರಾಜ್ಯ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸುಮಾರು ₨360 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಸರ್ಕಾರ ಹಸಿವು ಮುಕ್ತ ರಾಜ್ಯವನ್ನಾಗಿಸಲು ಕೇವಲ ₨1 ಗೆ ಅಕ್ಕಿ, ರಾಗಿ, ಜೋಳವನ್ನು ನೀಡಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ ಮಾತ ನಾಡಿ, ಪ್ರಧಾನ ಮಂತ್ರಿ ಹುದ್ದೆಗಾಗಿ ಕಚ್ಚಾಟದಲ್ಲಿ ತೊಡಗಿದ ಬಿಜೆಪಿ ಯಿಂದ ಅಭಿವೃದ್ಧಿ ಕನಸಿನ ಮಾತು. ಬಾಗಲ ಕೋಟೆ–ಕುಡಚಿ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಸಂಸದ ಪಿ.ಸಿ. ಗದ್ದಿಗೌಡರ ಅವರು ಮಾಡಿದ್ದಾದರೂ ಏನು ? ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. 10 ವರ್ಷಗಳ ಕಾಲ ಶೂನ್ಯ ಸಾಧನೆ ಮಾಡಿದ ಗದ್ದಿ ಗೌಡರ ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ ಅವರ ನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸುಮಾರು 15 ಕಿ.ಮಿ ವರೆಗೆ ಸಾಗಿದ ಪಾದಯಾತ್ರೆಯಲ್ಲಿ ಅಪಾರ ಬೆಂಬಲ ವ್ಯಕ್ತವಾಯಿತು. ಮಾಜಿ ಶಾಸಕ ಎಂ.ಜಿ. ನಂಜಯ್ಯನಮಠ, ಎಚ್.ಎ. ಕಡ ಪಟ್ಟಿ, ಲೋಕಣ್ಣ ಕೊಪ್ಪದ ಮಾತನಾ ಡಿದರು. ಗೋವಿಂದಪ್ಪ ಗುಜ್ಜನ್ನವರ ಸಬರೆ ಅಧ್ಯಕ್ಷತೆ ವಹಿಸಿದ್ದರು. ಅಹಿಂದ ಅಧ್ಯಕ್ಷ ಭೀಮಶಿ ತಳವಾರ, ತಾಲ್ಲೂಕು ಕುರು ಬರ ಸಂಘದ ಅಧ್ಯಕ್ಷ ಭೀಮಶಿ ಸರಕಾರ ಕುರಿ, ಜಿಲ್ಲಾ ಪಂಚಾಯ್ತಿ ಸದಸ್ಯ ದುಂಡ ಪ್ಪ ಲಿಂಗರಡ್ಡಿ ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಕಾಶ ತಟ್ಟಿಮನಿ, ದಯಾನಂದ ಪಾಟೀಲ, ವೆಂಕಣ್ಣ ಗದಿಗೆಪ್ಪಗೋಳ, ಸಿದ್ದು ದೇವಗೋಳ, ಡಾ.ಸತೀಶ ಮಲ ಘಾಣ, ಶಂಕರಗೌಡ ಪಾಟೀಲ, ಮಹಾ ದೇವ ಹೊಸಟ್ಟಿ, ಎಂ.ಬಿ. ಅಂಬಿಗೇರ ಉಪಸ್ಥಿತರಿದ್ದರು.ಹಣಮಂತ ಅಡವಿ ಸ್ವಾಗತಿಸಿ ನಿರೂಪಿಸಿದರು. ಮುದಕಪ್ಪ ಅಂಬಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.