ADVERTISEMENT

‘ಕೃತಿ ಓದದೆ ವಿಮರ್ಶೆ ಸಲ್ಲ’

‘ಸಮೀರವಾಡಿ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ವೀಣಾ ಬನ್ನಂಜೆ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 10:05 IST
Last Updated 29 ಜೂನ್ 2015, 10:05 IST
ಮುಧೋಳ ತಾಲ್ಲೂಕು 3ನೇ ಸಾಹಿತ್ಯ ಸಮ್ಮೇಳನದಲ್ಲಿ ಡಾ.ವೀಣಾ ಬನ್ನಂಜೆ ಮಾತನಾಡಿದರು
ಮುಧೋಳ ತಾಲ್ಲೂಕು 3ನೇ ಸಾಹಿತ್ಯ ಸಮ್ಮೇಳನದಲ್ಲಿ ಡಾ.ವೀಣಾ ಬನ್ನಂಜೆ ಮಾತನಾಡಿದರು   

ಕವಿ ಚಕ್ರವರ್ತಿ ರನ್ನ ವೇದಿಕೆ (ಸಮೀರವಾಡಿ):  ಸಾಹಿತಿಯಾದವನಿಗೆ ಸಾಮಾಜಿಕವಾಗಿ ಬಹು ದೊಡ್ಡ ಜವಾ ಬ್ದಾರಿಗಳಿರುತ್ತವೆ. ಕವಿ ತನ್ನ ಆಲೋಚನೆ ಗಳಿಗೆ ಬರಹ ರೂಪ ನೀಡುವಾಗ ಸಮಾಜದ ಸ್ವಾಸ್ಥ್ಯ ಕಾಪಾಡುವ ನೈತಿಕ ಹೊಣೆ ಆತನ ಮೇಲಿರುತ್ತದೆ. ತಾನು ಓದದೇ ಇರುವ ಕೃತಿಯೊಂದರ ಕುರಿತು ವಿಮರ್ಶೆ ಮಾಡುವ ಹಾಗೂ ಹರಿದು ಹಾಕುವಂತೆ ಪ್ರೇರೇಪಿಸುವ ಇಲ್ಲವೇ ಸುಟ್ಟು ಹಾಕುವಂತೆ ಪ್ರಚೋದನೆ ನೀಡು ವ ಕೆಲಸ ಮಾಡಬಾರದು ಎಂದು ಚಿಂತಕಿ ಹಾಗೂ ಅಧ್ಯಾತ್ಮ ಪ್ರವಾಚಕಿ ಡಾ.ವೀಣಾ ಬನ್ನಂಜೆ ಅಭಿಪ್ರಾಯಪಟ್ಟರು.

‘ಶಿವಲಿಂಗೇಶ್ವರ ಕಲ್ಯಾಣ ಮಂಟಪ ದಲ್ಲಿ ನಡೆದ ಮುಧೋಳ ತಾಲ್ಲೂಕು 3ನೇ ಸಾಹಿತ್ಯ ಸಮ್ಮೇಳನದಲ್ಲಿ ‘ಸಮೀರವಾಡಿ ದತ್ತಿ  ಪ್ರಶಸ್ತಿ’ಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು. ಸಮಚಿತ್ತ ದಿಂದ ಆಲೋಚಿಸುವ ಮನಸ್ಥಿತಿ ಉಳ್ಳವರು, ಅಂತರಂಗ –ಬಹಿರಂಗದಲ್ಲಿ ಸ್ವಚ್ಛತೆ ಉಳ್ಳವರು ಇನ್ನೊಬ್ಬರ ಭಾವನೆ ಗೌರವಿಸುವ ಮನೋಭಾವ ಇದ್ದವರು ರಚಿಸಿದ ಸಾಹಿತ್ಯ ಬಹುಕಾಲ ಜೀವಂತವಾಗಿ ಉಳಿಯುತ್ತದೆ’ ಎಂದರು.

ಅವಿಭಜಿತ ವಿಜಯಪುರ ಜಿಲ್ಲೆಯ ಕೊನೆಯ ಸಮ್ಮೇಳನದಲ್ಲಿ ಉಳಿಕೆ ಯಾಗಿದ್ದ ಹಣವನ್ನು ಪರಿಷತ್ತಿನಲ್ಲಿಟ್ಟು ಪ್ರತಿವರ್ಷ ಉತ್ತಮ ಕೃತಿಗಳಿಗೆ ಬಹು ಮಾನ ಘೋಷಿಸಲಾಗುತ್ತಿದ್ದು ಕಾರ ವಾರದ ಕನ್ನಡ ಮತ್ತು ಸಂಸ್ಕೃತಿ ಇಲಾ ಖೆಯ ಉಪ ನಿರ್ದೇಶಕ ಬಸವರಾಜ ಹೂಗಾರ, ತೇರದಾಳದ ಸಾಮಾಜಿಕ ಕಾರ್ಯಕರ್ತ ಎಸ್.ಆರ್. ರಾವಳ ಹಾಗೂ ಪತ್ರಕರ್ತ ಹ.ಸ. ಬ್ಯಾಕೋಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುಖ್ಯಾಂಶಗಳು
*ಸಾಹಿತಿ ಸಮಚಿತ್ತದಿಂದ ಆಲೋಚಿಸಬೇಕು
* ಓದದೆ ಕೃತಿಗಳನ್ನು ಸುಟ್ಟು ಹಾಕಬೇಡಿ
*ಭಾಷೆ ವರ್ಗ, ವರ್ಣ, ಅಂತಸ್ತನ್ನು ಬೆಸೆಯುತ್ತದೆ

ತೋಚಿದ್ದನ್ನು ಬರೆದು ಸಮಾಜದ ದಾರಿ ತಪ್ಪಿಸುವ ಹಕ್ಕು ಯಾರಿಗೂ ಇಲ್ಲ. ಪರಂ ಪರಾಗತವಾಗಿ ಗೌರವಿಸುತ್ತ ಬಂದಿರುವ ಕೃತಿಯೊಂದನ್ನು ಓದದೆ ಸುಟ್ಟು ಹಾಕಲು ಪ್ರೇರೇಪಿಸುವುದು ಅಪರಾಧ
ಡಾ.ವೀಣಾ ಬನ್ನಂಜೆ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.