ADVERTISEMENT

ರಬಕವಿ ಬನಹಟ್ಟಿ: 1,250 ಹೆಕ್ಟೇರ್‌ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 16:04 IST
Last Updated 30 ಜುಲೈ 2024, 16:04 IST
ರಬಕವಿ ಬನಹಟ್ಟಿ ಸಮೀಪದ ಮದನಮಟ್ಟಿ ಗ್ರಾಮದ ಬಳಿ ಕೃಷ್ಣಾ ನದಿ ನೀರಿನಿಂದಾಗಿ ಕಬ್ಬು ಬೆಳೆ ಜಲಾವೃತವಾಗಿರುವುದು
ರಬಕವಿ ಬನಹಟ್ಟಿ ಸಮೀಪದ ಮದನಮಟ್ಟಿ ಗ್ರಾಮದ ಬಳಿ ಕೃಷ್ಣಾ ನದಿ ನೀರಿನಿಂದಾಗಿ ಕಬ್ಬು ಬೆಳೆ ಜಲಾವೃತವಾಗಿರುವುದು   

ರಬಕವಿ ಬನಹಟ್ಟಿ: ತಾಲ್ಲೂಕಿನಲ್ಲಿ ಹದಿನೈದು ದಿನಗಳಲ್ಲಿ ಪ್ರವಾಹದಿಂದಾಗಿ ಒಂದು ಮನೆ ಹಾನಿಗೀಡಾಗಿದೆ ಮತ್ತು 1,250 ಹೆಕ್ಟೇರ್‌ ಕೃಷಿಭೂಮಿಯಲ್ಲಿ ಬೆಳೆದ ಬೆಳೆ ಮತ್ತು 7.30 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ತೋಟಗಾರಿಕೆಯ ಬೆಳೆಗಳು ನಾಶವಾಗಿವೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಕರ್ ತಿಳಿಸಿದರು.

ಮಂಗಳವಾರ ಮಾಹಿತಿ ನೀಡಿದ ಅವರು, ‘ರಬಕವಿ ಬನಹಟ್ಟಿ ತಾಲ್ಲೂಕಿನ ತಮದಡ್ಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮತ್ತು ಹಳಿಂಗಳಿ ಗ್ರಾಮದ ಮಹಾವೀರ ಪ್ರಾಥಮಿಕ ಶಾಲೆಯಲ್ಲಿ ಹಾಗೂ ರಬಕವಿ ಬನಹಟ್ಟಿ ತಾಲ್ಲೂಕಿನ ಅಸ್ಕಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಇಲ್ಲಿ ಒಟ್ಟು 429 ಜನರು ಇದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT