
ಪ್ರಜಾವಾಣಿ ವಾರ್ತೆಜಮಖಂಡಿ: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಕುಡುಕ!
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ವ್ಯಕ್ತಿಯೊಬ್ಬ ಸೋಮವಾರ ಮೊಬೈಲ್ ಟವರ್ ಏರಿ ಕೆಲಕಾಲ ಆತಂಕದ ವಾತಾವರಣವನ್ನುಂಟು ಮಾಡಿದ್ದನು.
ಕುಡಿದ ಮತ್ತಿನಲ್ಲಿ ಟವರ್ ಏರಿ ನಿಂತಿದ್ದ ಎನ್. ಅರ್ಜುನ್, ತುತ್ತ ತುದಿಯಲ್ಲಿ ಎರಡು ಕೈಬಿಟ್ಟು ಎದ್ದು ನಿಂತಿದ್ದು ಆತಂಕಕ್ಕೆ ಕಾರಣವಾಗಿತ್ತು.
ಅಲ್ಲಿಂದಲೇ ಕೆಳಗಿದ್ದವರ ಮೊಬೈಲ್‌ಗೆ ಫೋನ್ ಮಾಡಿ ಮಾತನಾಡುವುದಲ್ಲದೇ, ಸೆಲ್ಫಿಯನ್ನು ಹೊಡೆದುಕೊಳ್ಳುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರ್ಧ ಗಂಟೆ ಕಾಲ ಅಲ್ಲಿಯೇ ಇದ್ದನು. ಕೆಳಗಿದ್ದ ಕೆಲವರು ಮೊಬೈಲ್ ಮೂಲಕ ಮಾತನಾಡಿ ಅರ್ಜುನ್‌ನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.