ಬಾದಾಮಿಯಲ್ಲಿ ಮಂಗಳವಾರ ಸುರಿದ ಮಳೆಯಿಂದ ಬೆಟ್ಟದಿಂದ ಧುಮ್ಮಿಕ್ಕಿದ ಜೋಡಿ ಜಲಧಾರೆಗಳು
ಬಾದಾಮಿ: ಧಾರಾಕಾರ ಮಳೆಗೆ ಬೆಟ್ಟದಿಂದ ಜೋಡಿ ಜಲಧಾರೆಗಳು ಧುಮ್ಮಿಕ್ಕಿದವು. ಜಲಧಾರೆಗಳು ಒಂದಾಗಿ ಅಗಸ್ತ್ಯತೀರ್ಥ ಹೊಂಡಕ್ಕೆ ಸೇರಿದವು.
ಮಂಗಳವಾರ ಬೆಳಿಗ್ಗೆ ಸುರಿದ ಮಳೆಯಿಂದ ಪೂರ್ವ ದಿಕ್ಕಿನ ಎತ್ತರದ ಬೆಟ್ಟದಿಂದ ಜಲಧಾರೆಗಳು ನಯನ ಮನೋಹರವಾಗಿ ಧುಮ್ಮಿಕ್ಕಿ ಪ್ರವಾಸಿಗರ ಮತ್ತು ಸ್ಥಳೀಯರ, ನಿಸರ್ಗ ಪ್ರಿಯರ ಕಣ್ಮನ ಸೆಳೆದವು.
ಜನರು ಕ್ಯಾಮೆರಾದಲ್ಲಿ ಸ್ಮಾರಕಗಳೊಂದಿಗೆ ಜಲಧಾರೆ ಫೋಟೊ ಸೆರೆಹಿಡಿರು. ಗುಂಪು ಗುಂಪಾಗಿ ಸೆಲ್ಫಿ ಫೋಟೊ ತೆಗೆದುಕೊಂಡು ಸಂಭ್ರಮಿಸಿದರು.
ಮುಂಗಾರು ಮಳೆಯ ಆರಂಭದಲ್ಲಿ ಮೊದಲ ಬಾರಿಗೆ ಧುಮ್ಮಿಕ್ಕಿದ ಜೋಡಿ ಜಲಧಾರೆಗಳಿಂದ ಅಗಸ್ತ್ಯತೀರ್ಥ ಹೊಂಡಕ್ಕೆ ನೀರು ಸಂಗ್ರಹವಾಯಿತು.
ಮೂರು ದಿನಗಳಿಂದ ಸುರಿಯುತ್ತಿರುವ ಕೃತಿಕಾ ಮಳೆಯಿಂದ ರೈತರು ಖುಷಿಯಾಗಿದ್ದಾರೆ. ಮುಂಗಾರು ಬಿತ್ತನೆಗೆ ಹೊಲವನ್ನು ಸಜ್ಜುಗೊಳಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.