ADVERTISEMENT

ನಾವೆಲ್ಲರೂ ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಬೇಕು: ಸವದಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 8:48 IST
Last Updated 17 ಡಿಸೆಂಬರ್ 2025, 8:48 IST
ಮಹಾಲಿಂಗಪುರದ ಕೌಜಲಗಿ ನಿಂಗಮ್ಮ ಸಾಂಸ್ಕøತಿಕ ಭವನದಲ್ಲಿ ಹಮ್ಮಿಕೊಂಡ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದಲ್ಲಿ ಶಾಸಕ ಸಿದ್ದು ಸವದಿ, ಇತರರು ಪ್ರತಿಜ್ಞೆ ಸ್ವೀಕರಿಸಿದರು
ಮಹಾಲಿಂಗಪುರದ ಕೌಜಲಗಿ ನಿಂಗಮ್ಮ ಸಾಂಸ್ಕøತಿಕ ಭವನದಲ್ಲಿ ಹಮ್ಮಿಕೊಂಡ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದಲ್ಲಿ ಶಾಸಕ ಸಿದ್ದು ಸವದಿ, ಇತರರು ಪ್ರತಿಜ್ಞೆ ಸ್ವೀಕರಿಸಿದರು   

ಮಹಾಲಿಂಗಪುರ: ‘ದೇಶಕ್ಕೆ ಸ್ವಾತಂತ್ರ್ಯ ಬಂದರೂ ದೇಶ ಇನ್ನೂ ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ನಾವೆಲ್ಲರೂ ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಬೇಕು’ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದ ಕೌಜಲಗಿ ನಿಂಗಮ್ಮ ಸಾಂಸ್ಕೃತಿಕ ಭವನದಲ್ಲಿ ಬಿಜೆಪಿ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದರು.

‘ನಮ್ಮ ಸ್ಥಳೀಯ ಕೈಗಾರಿಕೆ, ವ್ಯಾಪಾರ ಉದ್ಯಮಗಳಿಗೆ ನಾವು ಹೆಚ್ಚಿನ ಬೆಂಬಲ ನೀಡಬೇಕು ಹಾಗೂ ಈ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ. ವಿದೇಶಿ ವಸ್ತುಗಳ ಮೋಹವನ್ನು ಬಿಟ್ಟು ಸ್ವದೇಶಿ ವಸ್ತುಗಳ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳಬೇಕು’ ಎಂದರು.

ADVERTISEMENT

ಸುರೇಶ ಅಕ್ಕಿವಾಟ ಮಾತನಾಡಿದರು. ಆತ್ಮನಿರ್ಭರ ಭಾರತ ನಿರ್ಮಾಣದ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.

ಶಂಕರಗೌಡ ಪಾಟೀಲ, ಮಹೇಶ ಜಿಡ್ಡಿಮನಿ, ಬಸವರಾಜ ಯರಗಟ್ಟಿ, ಮಲ್ಲಪ್ಪ ದಲಾಲ, ಜಗದೀಶ ಜಕ್ಕನ್ನವರ, ಶೇಖರ ಮಗದುಮ್, ಸೋಮು ಶಿರೋಳ, ಮಹಾಂತೇಶ ಪಾತ್ರೋಟ, ಆನಂದ ಕಂಪು, ಮಹಾಲಿಂಗ ಬುದ್ನಿ, ಪ್ರಾಚಾರ್ಯ ಶಿವಪ್ಪ ಜೋಡಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.