ಬಾಗಲಕೋಟೆ: ವಿದ್ಯಾಗಿರಿ, ನವನಗರ ಹಾಗೂ ಗದ್ದನಕೇರಿಗಳಲ್ಲಿ ಪಿರಮಿಡ್ ಸ್ಪಿರಿಚುವಲ್ ಸೊಸೈಟಿಸ್ ಮೂವ್‌ಮೆಂಟ್ ಆಫ್ ಇಂಡಿಯಾದಿಂದ ಭಾನುವಾರ ಸಸ್ಯಹಾರಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಾಥಾದಲ್ಲಿ ಪಾಲ್ಗೊಂಡಿದ್ದ ಸ್ವಯಂಸೇವಕರು ಮಾಂಸಾಹಾರದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ಧ್ಯಾನ ತರಬೇತುದಾರ ರಾಜಶೇಖರ ಅಡಿಕೆನ್ನವರ ಮಾತನಾಡಿ, ಖಿನ್ನತೆ, ನೆಮ್ಮದಿ ರಹಿತವಾದ ಜೀವನ, ಕಾಯಿಲೆಗಳಿಗೆ ಮಾಂಸಹಾರ ಸೇವನೆ ಪ್ರಮುಖ ಕಾರಣವಾಗಿದೆ. ಪ್ರಾಣಿಗಳಿಗೂ ನಮ್ಮಂತೆ ಜೀವಿಸುವ ಹಕ್ಕು ಇದ್ದು, ಅವುಗಳನ್ನು ಕೊಂದು ತಿನ್ನುವುದು ಒಪ್ಪುವಂತಹದಲ್ಲ. ಮಾಂಸಹಾರ ತ್ಯಜಿಸಿ ಸಸ್ಯಹಾರ ಪ್ರಚಾರಕ್ಕೆ ಜಾಥಾ ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.
ಸುಭಾಷ್ ಪತ್ರಿಜಿ ಅವರು ಸರಳ ಸೂತ್ರದ ಧ್ಯಾನ ಕಲಿಸಿಕೊಟ್ಟಿದ್ದು, ಪ್ರತಿ ಮನೆಗೂ ಧ್ಯಾನ ತಲುಪಿಸಿ ಜ್ಞಾನ ಬೆಳಗುವ ಗುರಿ ನಮ್ಮದಾಗಿದೆ. ಮಾಂಸಾಹಾರವನ್ನು ತ್ಯಜಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಧ್ಯಾನದಿಂದ ಮನಸ್ಸಿನ ನಿಯಂತ್ರಣ ಮಾಡಬಹುದಾಗಿದೆ ಎಂದರು.
ಸಾಯಿ ಮಂದಿರದ ಹಿರಿಯ ನಾಗರಿಕರ ವೇದಿಕೆ, ಕುಮಾರೇಶ್ವರ ಶಾಂತಾ ಶ್ರಮ, ಪರಿಸರ ಬಳಗ, ನಿಸರ್ಗ ಶಿಕ್ಷಣ ಸಂಸ್ಥೆ ಹಾಗೂ ಬಿವಿವಿ ಸಂಸ್ಥೆ ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.