ADVERTISEMENT

ರಾಂಪುರ: 20 ಎಕರೆ ಹೊಲ ಬೆಳೆಸಾಲು ಕೂಡಿಸಿದ ಎತ್ತುಗಳು!

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 3:53 IST
Last Updated 10 ಜುಲೈ 2025, 3:53 IST
20 ಎಕರೆ ಬಿತ್ತನೆಯ ಹೊಲವನ್ನು ಪಳಿಗೂಡಿಸಿ ಸಾಹಸ ಮೆರೆದ ಎತ್ತುಗಳ ಜೊತೆ ರೈತ ಅಶೋಕ ಮೆಳ್ಳಿ.
20 ಎಕರೆ ಬಿತ್ತನೆಯ ಹೊಲವನ್ನು ಪಳಿಗೂಡಿಸಿ ಸಾಹಸ ಮೆರೆದ ಎತ್ತುಗಳ ಜೊತೆ ರೈತ ಅಶೋಕ ಮೆಳ್ಳಿ.   

ರಾಂಪುರ: ಬೆನಕಟ್ಟಿ ಗ್ರಾಮದ ರೈತ ಅಶೋಕ ಮೆಳ್ಳಿ ಅವರ ಎತ್ತುಗಳು ಬಿತ್ತನೆ ಮಾಡಿದ 20 ಎಕರೆ ಹೊಲದ ಬೆಳೆಸಾಲು ಕೂಡಿಸಿ(ಪಳಿ ಹೊಡೆದು)ಸಾಹಸ ಮೆರೆದಿವೆ.

ಮುಂಗಾರು ಹಂಗಾಮಿಗೆ 20 ಎಕರೆ ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಈರುಳ್ಳಿ ಬಿತ್ತನೆ ಮಾಡಿದ್ದನ್ನು ಎತ್ತುಗಳು ಪಳಿ ಹೊಡೆಯುವ ಮೂಲಕ ರೈತಾಪಿ ಜನರು ಹುಬ್ಬೇರಿಸುವಂತೆ ಮಾಡಿವೆ.

ಒಂದು ದಿನಕ್ಕೆ ಎತ್ತುಗಳು 12 ಎಕರೆ ತನಕ ಪಳಿ ಹೊಡೆಯಬಹುದಾಗಿದೆ. ಆದರೆ, ಅಶೋಕ ಅವರ ಎತ್ತುಗಳು ಬರೋಬ್ಬರಿ 20 ಎಕರೆ ಪಳಿಗೂಡಿಸಿವೆ. ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾದ ಕಾರ್ಯ ಮಧ್ಯಾಹ್ನ 4 ಗಂಟೆಗೆ ಪೂರ್ಣಗೊಂಡಾಗ ರೈತರು ಎತ್ತುಗಳ ಸಾಹಸ ಕೊಂಡಾಡಿ ಗುಲಾಲು ಹಾಕಿ ಸಂಭ್ರಮಿಸಿದರು.

ADVERTISEMENT
ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡಿದ 20 ಎಕರೆ ಹೊಲವನ್ನು ಪಳಿಗೂಡಿಸುತ್ತಿರುವ ಎತ್ತುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.