
ಬಾಗಲಕೋಟೆ: ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಸ್. ಪಾವಟೆ ಅವರಿಗೆ ಶರಣ ಸಾಹಿತ್ಯ ದೀಪಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಾಗಲಕೋಟೆ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಶರಣ ಸಾಹಿತ್ಯ ಪರಿಷತ್, ಶಿವಾನುಭವ ಸಮಿತಿ ಮತ್ತು ಕದಳಿ ಮಹಿಳಾ ವೇದಿಕೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಎಚ್.ಜಿ. ಮೃತ್ಯುಂಜಯ ಪ್ರತಿಷ್ಠಾನ, ಕೊಡಮಾಡುವ ಪ್ರಶಸ್ತಿಯನ್ನು ಪಾವಟೆ ಅವರು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಎ.ಎಸ್.ಪಾವಟೆ ಅವರ ಕೃತಿ ‘ವಚನ ವಿಹಾರ-1’ ಬಿಡುಗಡೆ ಮಾಡಿ ಮಾತನಾಡಿದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪಾವಟೆ ಅವರ ಶರಣ ಸೇವೆ ಸಾರ್ಥಕವಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಎ.ಎಸ್. ಪಾವಟೆ ಮಾತನಾಡಿ, ಮನೆತನದ ಸಂಸ್ಕಾರ, ಬಿವಿವಿ ಸಂಘ ಮತ್ತು ಚರಂತಿಮಠದ ಶ್ರೀಗ ಸಾಮೀಪ್ಯದಿಂದಾಗಿ ಶರಣ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂದರು.
ಚರಂತಿಮಠದ ಪ್ರಭು ಸ್ವಾಮೀಜಿ, ಯರನಾಳದ ಗುರುಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ದಯಾನಂದ ನೂಲಿ, ‘ಇಷ್ಟಲಿಂಗದ ವ್ಶೆಜ್ಞಾನಿಕ ಪರಿಕಲ್ಪನೆ’ ಕುರಿತು ಉಪನ್ಯಾಸ ನೀಡಿದರು. ಇಷ್ಟಲಿಂಗ ಪೂಜೆ, ನಿರೀಕ್ಷಣೆಯಿಂದಾಗುವ ಶಾರೀರಿಕ, ಮಾನಸಿಕ ಸ್ವಾಸ್ಥ್ಯಗಳನ್ನು ದೃಶ್ಯ ಮಾಧ್ಯಮದ ಮೂಲಕ ವಿವರಿಸಿದರು.
ಶಸಾಪ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟರ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಎಚ್.ಎಚ್. ಶೆಟ್ಟರ್, ಪಂಡಿತ ಅರಬ್ಬಿ, ಕಸಾಪ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲ್ಲೂಕು ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಬಸವರಾಜ ಮುಕ್ಕುಪ್ಪಿ, ಸುಮಿತ್ರಾಬಾಯಿ ಹಿರೇಮಠ, ರಾಜೇಶ್ವರಿ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.