
ಬಾದಾಮಿ: ಸಮೀಪದ ನೆಲವಗಿ ಗ್ರಾಮದ ಆಸರೆ ಬಡಾವಣೆಯಲ್ಲಿಯೇ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭವಾಗಿದ್ದು, ಮಕ್ಕಳು ಹಾಗೂ ಗ್ರಾಮಸ್ಥರಿಗೆ ಖುಷಿ ತಂದಿದೆ.
ನೆಲವಗಿ ಆಸರೆ ಬಡಾವಣೆಯಿಂದ 1ರಿಂದ 7ರ ವರೆಗೆ ಒಟ್ಟು 30 ಮಕ್ಕಳು 2 ಕಿ.ಮೀ ನಡೆಯುತ್ತ ಹಳೇ ಊರಿನ ಸರ್ಕಾರಿ ಶಾಲೆಗೆ ಹೋಗುತ್ತಿದ್ದರು. ಈಗ ಆಸರೆ ಬಡಾವಣೆಯಲ್ಲಿಯೇ ಶಾಲೆ ಆರಂಭವಾಗಿದೆ.
‘ಶಾಲೆ ಆರಂಭವಾಗಿದೆ 1ರಿಂದ 7ನೇ ತರಗತಿಯ ಮಕ್ಕಳಿಗೆ ಒಬ್ಬ ಶಿಕ್ಷಕರಿಗೆ ಬೋಧಿಸಲು ತೊಂದರೆಯಾಗುತ್ತಿದೆ. ಇನ್ನೊಬ್ಬ ಶಿಕ್ಷಕರನ್ನು ನೇಮಿಸಬೇಕು’ ಎಂದು ಪೋಷಕರು ಒತ್ತಾಯಿಸಿದ್ದಾರೆ.
ಎರಡು ವರ್ಷಗಳಿಂದ ಶಾಲಾ ಕಟ್ಟಡ ಮೌನವಾಗಿತ್ತು. ಶಾಲಾ ಆವರಣ ಕುರಿದೊಡ್ಡಿ, ಮೇವಿನ ಬಣಿವೆ ಮತ್ತು ವಾಹನಗಳ ನಿಲುಗಡೆಯ ಸ್ಥಳವಾಗಿತ್ತು. ಈಗ ಎಲ್ಲವೂ ಸ್ವಚ್ಛವಾಗಿದೆ. ಶಾಲಾ ಕೊಠಡಿಯಲ್ಲಿ ಮಕ್ಕಳ ಕಲರವ ಕೇಳಿಸುತ್ತಿದೆ. ಮಕ್ಕಳು, ಪೋಷಕರು ಖುಷಿಯಾಗಿದ್ದಾರೆ.
ಸೆ.3 ರ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಈ ಕುರಿತು ‘ಆಸರೆ ಬಡಾವಣೆಗೆ ಬೇಕಿದೆ ಶಾಲೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಅಧಿಕಾರಿಗಳಿಗೆ, ಪತ್ರಿಕೆಗೆ ಪೋಷಕರು ಕೃತಜ್ಞತೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.