
ಬಾಗಲಕೋಟೆ: ಭಾರತೀಯರ ಸ್ವಾಭಿಮಾನದ ಕೆಚ್ಚನ್ನು ಬಡಿದೆಬ್ಬಿಸಿದ ರಾಷ್ಟ್ರನಾಯಕ ಅಟಲ್ ಬಿಹಾರಿ ವಾಜಪೇಯಿ ಆಧುನಿಕ ಭಾರತದ ಶಿಲ್ಪಿಯಾಗಿದ್ದರು. ಅವರೊಬ್ಬ ಯುಗಪುರುಷ ಎಂದು ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಹೇಳಿದರು.
ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಬಿಜೆಪಿ ಬಾಗಲಕೋಟೆ ಮತಕ್ಷೇತ್ರ ಘಟಕದಿಂದ ಗುರುವಾರ ವಾಜಪೇಯಿ ಅವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಸನಾತನ ಹಿಂದೂ ಸಂಸ್ಕೃತಿಯ ಪ್ರತಿನಿಧಿಯಾಗಿ, ರಾಷ್ಟ್ರೀಯತೆಯ ಪ್ರೇರಕ ಶಕ್ತಿಯಾಗಿ ಬೆಳಗಿದ ವಾಜಪೇಯಿ ಭಾರತೀಯರ ಪಾಲಿಗೆ ಸ್ಫೂರ್ತಿ ಎಂದರು.
ಜಿ.ಎನ್. ಪಾಟೀಲ, ಲಕ್ಷ್ಮೀನಾರಾಯಣ ಕಾಸಟ್, ರಾಜು ನಾಯ್ಕರ, ರಾಜು ಮುದೇನೂರ, ಭಾಗೀರಥಿ ಪಾಟೀಲ, ಅಶೋಕ ಲಿಂಬಾವಳಿ, ಸುರೇಶ ಕೊಣ್ಣುರ, ರಾಜು ರೇವಣಕರ ಬಸವರಾಜ ಹುನಗುಂದ, ಶಿವಾನಂದ ಟವಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.