ADVERTISEMENT

ಅಮೀನಗಡ | ಆಯುಧ ಪೂಜೆ: ಜಟ್ಟಿಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 3:59 IST
Last Updated 3 ಅಕ್ಟೋಬರ್ 2025, 3:59 IST
ಅಮಿನಗಡ ಪಟ್ಟಣದಲ್ಲಿ ಬುಧವಾರ ಗರಡಿಮನೆಯ ಜಟ್ಟಿಗಳಿಂದ ಲೋಡ್ ಮೆರವಣಿಗೆ ನಡೆಯಿತು 
ಅಮಿನಗಡ ಪಟ್ಟಣದಲ್ಲಿ ಬುಧವಾರ ಗರಡಿಮನೆಯ ಜಟ್ಟಿಗಳಿಂದ ಲೋಡ್ ಮೆರವಣಿಗೆ ನಡೆಯಿತು    

ಅಮೀನಗಡ: ಆಯುಧ ಪೂಜೆ ಹಿನ್ನೆಲೆಯಲ್ಲಿ ಪಟ್ಟಣದ ಹಟಗಾರ ಸಮಾಜದ ಗರಡಿ ಮನೆ ವತಿಯಿಂದ ಬುಧವಾರ ಕುಸ್ತಿಪಟುಗಳ ಲೋಡ್ ಮೆರವಣಿಗೆ ಸಂಭ್ರಮದಿಂದ ನೆರವೇರಿತು.

ಇತ್ತೀಚಿಗೆ ಗರಡಿ ಮನೆಗಳಲ್ಲಿ ಜಟ್ಟಿಗಳು ಕವಾಯತ್ತುಗಳ ಮೂಲಕ ದೈಹಿಕ ಆರೋಗ್ಯಕ್ಕೆ ಹಾಗೂ ಕುಸ್ತಿ ತಯಾರಿಗೆ ದೇಹದ ಸದೃಢತೆ ಹಾಗೂ ಲೋಡಗಳನ್ನು ಎತ್ತುವ ದೈಹಿಕ ಸಾಮರ್ಥ್ಯಗಳ ತಯಾರಿ ಕಡಿಮೆ ಆಗುತ್ತಿರುವ ಸನ್ನಿವೇಶದಲ್ಲಿ ಯುವ ಪೀಳಿಗೆ ಮತ್ತೆ ಗರಡಿ ಮನೆಗಳತ್ತ ಮುಖ ಮಾಡಿ ಹಿಂದಿನ ಪರಂಪರೆ ಮುಂದುವರೆಯಬೇಕು ಎಂದು ಇಂದಿನ ಯುವ ಸಮೂಹ ನಾಚುವಂತೆ ಜಟ್ಟಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಲೋಡ ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿದರು.

ಹಟಗಾರ ಸಮಾಜದ ಬಿ.ಎಸ್.ನಿಡಗುಂದಿ, ಎಸ್. ಎಸ್ ಚಳ್ಳಗಿಡದ, ಅಂದಾನಪ್ಪ ಗುಡ್ಡದ, ನಿಂಗಪ್ಪ ಬ್ಯಾಕೋಡಿ, ಸಿದ್ದಲಿಂಗಪ್ಪ ಸಿಂಹಾಸನ, ಪ್ರಭಾಕರ ನಾಗರಾಳ,ಚಂದ್ರು ಹುಬ್ಬಳ್ಳಿ, ನಿಂಗಪ್ಪ ನಾಗರಾಳ, ಪುಂಡಲೀಕಪ್ಪ ಮೂಲಿಮನಿ,ವಿರೂಪಾಕ್ಷ ಗೋಕಾವಿ, ಸಂಗಮೇಶ ನಿಡಗುಂದಿ ಸೇರಿದಂತೆ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.