ADVERTISEMENT

ರಬಕವಿ ಬನಹಟ್ಟಿ: ಇಪ್ಪತ್ತೈದು ಬೆರಳುಗಳ ಮಗುವಿನ ಜನನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 16:11 IST
Last Updated 19 ಜುಲೈ 2024, 16:11 IST
ರಬಕವಿಯ ಸನಶೈನ್ ಆಸ್ಪತ್ರೆಯಲ್ಲಿ ಹನ್ನೆರಡು ಕಾಲ್ಬೆರಳು ಮತ್ತು 13 ಕೈಬೆರಳು ಹೊಂದಿದ ಮಗುವಿನ ಜನನ
ರಬಕವಿಯ ಸನಶೈನ್ ಆಸ್ಪತ್ರೆಯಲ್ಲಿ ಹನ್ನೆರಡು ಕಾಲ್ಬೆರಳು ಮತ್ತು 13 ಕೈಬೆರಳು ಹೊಂದಿದ ಮಗುವಿನ ಜನನ   

ರಬಕವಿ ಬನಹಟ್ಟಿ: ರಬಕವಿಯ ಸನಶೈನ್ ಆಸ್ಪತ್ರೆಯಲ್ಲಿ ಶುಕ್ರವಾರ ಒಟ್ಟು ಇಪ್ಪತ್ತೈದು ಬೆರಳುಗಳನ್ನು ಹೊಂದಿದ ಮಗುವಿನ ಜನನವಾಗಿದೆ.

ಗುರುಪ್ಪ ಮತ್ತು ಭಾರತಿ ದಂಪತಿಗಳಿಗೆ ಜನಿಸಿದ ಮಗುವಾಗಿದೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ನವಜಾತ ಶಿಶುವಿನ ಬಲಗೈಯಲ್ಲಿ 6 ಬೆರಳುಗಳು, ಎಡಗೈಯಲ್ಲಿ 7 ಬೆರಳುಗಳು ಇದ್ದು, ಒಟ್ಟು ಎರಡು ಕಾಲುಗಳಲ್ಲಿ ತಲಾ ಆರು ಬೆರಳುಗಳು ಇವೆ.

ADVERTISEMENT

ಆಸ್ಪತ್ರೆಯ ಸ್ತ್ರೀ ರೋಗ್ಯ ವೈದ್ಯೆ ಪಾರ್ವತಿ ಹಿರೇಮಠ ಮಾತನಾಡಿ, ಕ್ರೊಮೊಸೊಮ್ ಗಳಿಂದ ಇಂತಹ ಮಗುವಿನ ಜನ್ಮವಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.