
ಬಾದಾಮಿ: ‘ ಚಾಲುಕ್ಯ ಸಾಮ್ರಾಜ್ಯದ ಶಿಲ್ಪಿಗಳು ವಿಶ್ವಕ್ಕೆ ಹಿರಿಮೆ ಸಾರುವಂಥ ಮೂರ್ತಿ ಶಿಲ್ಪಗಳನ್ನು ರಚಿಸಿದ್ದಾರೆ. ಕಲಾವಿದರು ಸ್ಮಾರಕಗಳನ್ನು ಚಿತ್ರದಲ್ಲಿ ಬಿಡಿಸಿ ಈ ಕಲೆಯನ್ನು ಶ್ರೀಮಂತವಾಗಿರಿಸಬೇಕಿದೆ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಚಾಲುಕ್ಯ ಉತ್ಸವದ ಅಂಗವಾಗಿ ವಸ್ತು ಸಂಗ್ರಹಾಲಯದ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಚಾಲುಕ್ಯ ಉತ್ಸವ-2026’ ಎಂದು ಬರೆಯುವ ಮೂಲಕ ದೃಶ್ಯಕಲಾ ಶಿಬಿರಕ್ಕೆ ಚಾಲನೆ ನೀಡಿದರು.
‘ಚಿತ್ರಕಲೆ ಮತ್ತು ಸಂಗೀತ ಬೌದ್ಧಿಕ ವಿಕಸನಕ್ಕೆ ಪೂರಕವಾಗಿವೆ. ಚಿತ್ರಕಲೆ ಕೇವಲ ಚಿತ್ರಿಸುವುದಲ್ಲ. ಮಾನವನ ವಿಕಾಸವನ್ನು ಹೇಳುತ್ತದೆ. ಶಾಲಾ ಮಕ್ಕಳಿಗೆ ಸಂಗೀತ ಮತ್ತು ಚಿತ್ರಕಲೆ ಅವಶ್ಯಕ’ ಎಂದು ಹೇಳಿದರು.
‘ಆದಿಮಾನವರಿಗೆ ಚಿತ್ರಕಲೆಯೇ ಭಾಷಾ ಅಭಿವ್ಯಕ್ತಿಯಾಗಿತ್ತು. ಭಾಷೆಗಿಂತ ಮೊದಲು ಕಲೆ ಹುಟ್ಟಿದೆ ’ ಎಂದು ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಐ. ಬಾರಾವಲಿ ಹೇಳಿದರು.
ಸಂಗೀತಾ ಕೋಲಾರ, ಶಿವುಕುಮಾರ ಹಿರೇಮಠ, ಅಶೋಕ ಕೋಟನಕರ, ಅಶೋಕ ನಾಗಠಾಣ, ಪಿಎಸ್ಐ ಹನುಮಂತ ನೇರಳೆ ಮತ್ತು ಪುರಸಭೆ ಮಾಜಿ ಸದಸ್ಯರು ಇದ್ದರು.
ಶಿವಾನಂದ ಬಡಿಗೇರ, ಮಹಾದೇವ ಜಗತಾಪ, ಬಸೀರ್ ವಾಚಮೇಕರ್, ಗೋಪಾಲ ದೇವರಡ್ಡಿ, ಮಹಾದೇವ ಚಲವಾದಿ, ಬಸವರಾಜ ಮರಿಗೌಡರ, ಅಶ್ವತ್ಥ, ಮಹಾಂತೇಶ ಪಲದಿನ್ನಿ, ಕಾವೇರಿ ಪೂಜಾರ, ದಿನೇಶ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.