ADVERTISEMENT

‘ಸ್ವಚ್ಛ ವಾತಾವರಣ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಮುಖ್ಯ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 16:12 IST
Last Updated 26 ಸೆಪ್ಟೆಂಬರ್ 2024, 16:12 IST
ಅಮೀನಗಡ ಸಮೀಪದ ಹೊನ್ನರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗೋ ಗ್ರೀನ್ ಕಾರ್ಯಕ್ರಮ ನಡೆಯಿತು
ಅಮೀನಗಡ ಸಮೀಪದ ಹೊನ್ನರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗೋ ಗ್ರೀನ್ ಕಾರ್ಯಕ್ರಮ ನಡೆಯಿತು   

ಅಮೀನಗಡ: ‘ಶಾಲಾ ಕಾಲೇಜುಗಳಲ್ಲಿ ಸ್ವಚ್ಛ ಹಾಗೂ ಸುಂದರ ಹಸಿರುಮಯ ವಾತಾವರಣ ನಿರ್ಮಿಸುವಲ್ಲಿ ಮಕ್ಕಳ ಪಾತ್ರ ಮುಖ್ಯವಾಗಿದೆ’ ಎಂದು ಶಿಕ್ಷಕ ಎಂ.ಬಿ. ವಂದಾಲಿ ಅಭಿಪ್ರಾಯಪಟ್ಟರು.

ಸಮೀಪದ ಹೊನ್ನರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಗೋ ಗ್ರೀನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹುಣಸೆ, ಬೇವು, ಔಡಲ, ಚಿಕ್ಕು, ಸೀತಾಫಲ ಸೇರಿದಂತೆ ವಿವಿಧ ಗಿಡಮರಗಳ ಬೀಜಗಳನ್ನು ತಂದು ಫಲವತ್ತಾದ ಕಪ್ಪು ಮಣ್ಣನ್ನು ಹದ ಮಾಡಿ ಬೀಜದುಂಡೆ ತಯಾರಿಸಿದರು.

ಶಿಕ್ಷಕ ಎಸ್.ಎಲ್ ಕಣಗಿ ಮಾತನಾಡಿದರು. ಶಿಕ್ಷಕ ಎಸ್.ಎಸ್ ಲಾಯದಗುಂದಿ ರಂಗೋಲಿಯಲ್ಲಿ ಮರದ ಚಿತ್ರ ಬಿಡಿಸಿ ಅದನ್ನು ಬೀಜದುಂಡೆಗಳಿಂದ ಅಲಂಕರಿಸಿ ಎಲ್ಲರ ಗಮನ ಸೆಳೆದರು.

ADVERTISEMENT

ಮುಖ್ಯಶಿಕ್ಷಕ ಪಿ. ಎಸ್ ಮಾಲಗಿತ್ತಿ, ಎಂ.ಜಿ ಬಡಿಗೇರ, ಅಶೋಕ ಬಳ್ಳಾ, ಬಸಮ್ಮ ಗಟ್ಟಿಗನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.