ADVERTISEMENT

ಸಸಾಲಟ್ಟಿ: ಮತಗಟ್ಟೆ ಎದುರು ವಾಮಾಚಾರದ ಕುರುಹು ಚರ್ಚೆಗೆ ಗ್ರಾಸ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 11:52 IST
Last Updated 20 ಡಿಸೆಂಬರ್ 2020, 11:52 IST
ವಾಮಾಚಾರದ ಕುರುಹು
ವಾಮಾಚಾರದ ಕುರುಹು   

ಬಾಗಲಕೋಟೆ: ಗ್ರಾಮ ಪಂಚಾಯ್ತಿ ಚುನಾವಣೆ ಮೊದಲ ಹಂತದ ಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗ ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದಲ್ಲಿ ವಾಮಾಚಾರದ ಕುರುಹುಗಳು ಕಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಚುನಾವಣೆಯಲ್ಲಿ ಗೆಲ್ಲಲು ಕೆಲವರು ವಾಮಾಚಾರದ ಮೊರೆ ಹೋಗಿದ್ದಾರೆ.

ಭಾನುವಾರ ನಸುಕಿನಲ್ಲಿ ಮತದಾನ ನಡೆಯಲಿರುವ ಶಾಲೆಯ ಆವರಣ ಸೇರಿದಂತೆ ಗ್ರಾಮದ ಹಲವು ಕಡೆ ವಾಮಾಚಾರದ ಕುರುಹುಗಳು ಕಂಡಿದ್ದು, ಗೊಂಬೆ, ನಿಂಬೆಹಣ್ಣು, ಗುಲಾಲ್ ಹಾಕಿ ರಸ್ತೆ ಮಧ್ಯೆ ಒಡೆದ ಕುಂಬಳಕಾಯಿ ಇಟ್ಟು ಹೋಗಿರುವುದು ಕಂಡು ಬಂದಿದೆ.

ADVERTISEMENT

ಇದನ್ನು ಕಂಡ ಅಭ್ಯರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ವಾಮಾಚಾರ ಮಾಡಿ ಇಡಲಾಗಿದ್ದ ವಸ್ತುಗಳನ್ನು ತೆಗೆದು ನೋಡಿದಾಗ ಅದರಲ್ಲಿ ಅಭ್ಯರ್ಥಿಯೊಬ್ಬರ ಹೆಸರು ಬರೆದಿರುವುದು ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.